(ವರದಿಗಾರರು ಅಯ್ಯಣ್ಣ ಮಾಸ್ಟರ್ ಉದಯ ವಾಹಿನಿ ಪೀಣ್ಯ ದಾಸರಹಳ್ಳಿ)

ಉದಯವಾಹಿನಿ, ಪೀಣ್ಯ ದಾಸರಹಳ್ಳಿ: ಹೆಗ್ಗನಹಳ್ಳಿಯ ನಿಸರ್ಗ ಶಾಲೆಯಲ್ಲಿ ಭಾರತೀಯ ಸಂಶೋಧನಾ ಸಂಸ್ಥೆಯಿಂದ ಮೂರನೇ ಭಾಗವಾಗಿರುವ ವಿಕ್ರಂ ಲ್ಯಾಂಡರ್ ಚಂದ್ರನ ಕಕ್ಷೆ ಅಣಿಯಾಗುತ್ತಿದ್ದಂತೆ ನಿಸರ್ಗ ಶಾಲೆಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಸೇರಿ ಮೂರನೇ ಚಂದ್ರಯಾನ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ತಿಳಿಯಲು ಯಾವುದೇ ಆತಂಕವಿಲ್ಲದೆ ಉಡಾವಣೆಯಾಗಲೆಂದು ನಮ್ಮ ರಾಷ್ಟ್ರ ಧ್ವಜ ಹಿಡಿದು ಪತಸಂಚಲನೆ ಆಯೋಜನೆ ಮಾಡಲಾಗಿತ್ತು ಈ ಆಯೋಜನೆಯನ್ನು ಉದ್ದೇಶಿಸಿ ಮಾತನಾಡಿದ ನಿಸರ್ಗ ಶಾಲೆಯ ಸಂಸ್ಥಾಪಕ ಅಧ್ಯಕ್ಷ  ಎಚ್ ಎನ್ ಗಂಗಾಧರ್ ನಮ್ಮ ಭಾರತ ದೇಶದ ಬಾಹ್ಯಾಕಾಶ ಸಂಸ್ಥೆಯ ಹೆಮ್ಮೆಯ ವಿಜ್ಞಾನಿಗಳ ಪರಿಶ್ರಮದಿಂದ ಹಾಗೂ ಕೇಂದ್ರ ಸರ್ಕಾರದ ಸಹಕಾರದಿಂದ ವಿಕ್ರಂ ಲ್ಯಾಂಡರ್ ಚಂದ್ರನ ಕಕ್ಷೆಗೆ ಇಳಿಯಲು ದೊಡ್ಡ ಕೊಡುಗೆ ಇದೆ ಎಂದು ವಿಜ್ಞಾನಿಗಳನ್ನು ಮತ್ತು ಕೇಂದ್ರ ಸರ್ಕಾರವನ್ನು ಶ್ಲಾಗಿಸಿದರು ಮತ್ತು ಶುಭ ಕೋರಿದರು.
ನಮ್ಮ ನಾಡಿನ ವಿದ್ಯಾರ್ಥಿಗಳು ಸಹ ಡಾ. ಎಪಿಜೆ ಅಬ್ದುಲ್ ಕಲಾಂ ಮತ್ತು ಇನ್ನುಳಿದ ಮಹಾನ್ ಸಂಶೋಧಕರಂತೆ ದೇಶ ಮತ್ತು ವಿಶ್ವ ಮೆಚ್ಚುವಂತಹ ಸಂಶೋಧಕ ಹುದ್ದೆಗಳನ್ನು ಅಲಂಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು ನಂತರ ವಿದ್ಯಾರ್ಥಿಗಳಿಂದ ರಾಜ ಬೀದಿಗಳಲ್ಲಿ ಪತಸಂಚಲನೆಯೊಂದಿಗೆ ಮೆರವಣಿಗೆ ನಡೆಸಿ ಮೂರನೇ ಚಂದ್ರಯಾನಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಸ್ವರೂಪ, ಭಾರತ, ಗೋಪಾಲ್, ಶ್ರೀನಿವಾಸ್,  ಶಾಲೆಯ ಶಿಕ್ಷಕ ವೃಂದ ಮತ್ತು ಪೋಷಕರು ವಿದ್ಯಾರ್ಥಿಗಳು ಸಾರ್ವಜನಿಕ ಬಂಧು ಭಗನಿಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!