ಉದಯವಾಹಿನಿ, ಯಾದಗಿರಿ: ಜಿಲ್ಲಾ ಎಸ್ ಸಿ ಮತ್ತು ಎಸ್‌ಟಿ ದೌರ್ಜನ್ಯ ಸಮಿತಿಯ ನಾಮ ನಿರ್ದೇಶನ ಸದಸ್ಯರಾಗಿ ರಾಮಣ್ಣ ಸಾದ್ಯಾಪುರ ಅವರನ್ನು ಇತ್ತೀಚೆಗೆ ಆಯ್ಕೆ ಮಾಡಲಾಗಿದೆ. ಇದರಿಂದಾಗಿ ಭೀಮ ಆರ್ಮಿ ಜಿಲ್ಲಾ ಸಮಿತಿಯಿಂದ ಇಂದು ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ಯಮಿ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯ ಶಹಾಪುರದಲ್ಲಿ ರಾಮಣ್ಣ ಸಾದ್ಯಾಪುರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶರಣರೆಡ್ಡಿ ಹತ್ತಿಗೂಡುರು, ಶರಣಪ್ಪ ಗಂಗನಾಳ, ಕಂಡಪ್ಪ ಅಯ್ಯಳ ಬಿ, ಪರಶುರಾಮ ಕಟ್ಟಿಮನಿ, ಭೀಮರಾಯ, ಬಸವರಾಜ ರಸ್ತಾಪುರ, ಸಮಾಜದ ಯುವಕರು ಉಪಸ್ಥಿತರಿದ್ದರು.
