ಉದಯವಾಹಿನಿ, ಕೊಲ್ಹಾರ: ಜೀವನ ನಿಂತ ನೀರಾಗಬಾರದು ನಿರಂತರ ಚಲನಶೀಲತೆ ಆದರ್ಶ ಜೀವನದ ಗುಟ್ಟು ಪ್ರತಿಯೊಬ್ಬರ ಆತ್ಮದಲ್ಲಿ ಪರಮಾತ್ಮನ ಸ್ವರೂಪವಿದೆ ಅದನ್ನು ಕಾಣಲು ನಾವು ಪರಿಶುದ್ಧರಾಗಬೇಕು ಜೀವನದ ಏರಿಳಿತದಲ್ಲಿ ತಾಳ್ಮೆ ಸಹನೆಯಿಂದ ಮುನ್ನಡೆದು ಜೀವನದಲ್ಲಿ ಶಾಂತಿ ಸಮಾಧಾನ ಪಡೆಯಬೇಕು ಅಂತಹ ಸಾಧನೆಗೆ ಅರಿವು ಆಚಾರ ಕಲಿಸುವುದೇ ಈ ಶ್ರಾವಣ ಮಾಸ ಎಂದು ಕೊಲ್ಹಾರ ಪಟ್ಟಣದ ಶೀಲವಂತ ಹಿರೇಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪೂಜೆ ನೆರವೆರಿಸಿ ಶ್ರೀ ಘ ಮ ಪೂ ಡಾ. ಕೈಲಾಸನಾಥ ಶ್ರೀಗಳು ಹೇಳಿದರು.
ಬಂತಯ್ಯ ಶ್ರಾವಣ ಮಾಸ ಶಿವ ಶರಣರಿಗೆ ಹರುಷ ಎಂಬ ನಾಣ್ಣುಡಿಯಂತೆ ಹಿಂದೂ ಧರ್ಮದಲ್ಲಿ ಶ್ರಾವಣ ಮಾಸ ಬಲು ಶ್ರೇಷ್ಠ ಶಿವ ಭಕ್ತರಿಗೆ ಸಂಜೀವಿನಿ ಆಧ್ಯಾತ್ಮ ಸಾಧನೆಗೆ ಅಡಿಪಾಯ ಭಾವ ಮನ ಶುದ್ಧಿಗೆ ಸ್ಪೂರ್ತಿದಾಯಕ ಜಪ ತಪಸ್ಸು ಸಿದ್ಧಿ ಸಾಧನೆಗೆ ಶ್ರೇಷ್ಠ ಕಾಲ ಎಲ್ಲೆಡೆಯಲ್ಲಿ ಶಿವ ಝೇಂಕಾರ ಗುರು ಪೀಠ ಮಠಗಳಲ್ಲಿ ,ಪುಣ್ಯ ಕ್ಷೇತ್ರ, ದೇವಸ್ಥಾನಗಳಲ್ಲಿ ಶಿವ ನಾಮ ಸ್ಮರಣೆ ಸದಾ ನಡೆಯಬೇಕು ಸಹಜ ಸತ್ಯದ ಬದುಕು ಆದರ್ಶ ಚಿಂತನೆಗಳು ಜನರ ಮನಸ್ಸಿನಿಂದ ದೂರಾಗಬಾರದು ಅಂತಹ ಸಂಸ್ಕಾರಗಳು ಈ ಶ್ರಾವಣ ಮಾಸದಲ್ಲಿ ನಡೆದುಕೊಂಡು ಬರಲಿ ಎಂದು ಪೂಜ್ಯರು ಆಶೀರ್ವಚನದಲ್ಲಿ ನುಡಿದರು. ಶ್ರಾವಣ ಪೂಜಾ ಸಮಾರಂಭದಲ್ಲಿ ಕೊಲ್ಹಾರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!