ಉದಯವಾಹಿನಿ, ಸಿಂಧನೂರು : ತಾಲ್ಲೂಕಿನ ಗೊರಬಾಳ ಗ್ರಾಮದಲ್ಲಿ ರಾಯಚೂರು ವಿಶ್ವವಿದ್ಯಾಲಯ ಮತ್ತು ನೋಬೆಲ್ ಪದವಿ ಮಹಾವಿದ್ಯಾಲಯ ಸಿಂಧನೂರು ಇವರ ಸಂಯುಕ್ತ ಆಶ್ರಯದಲ್ಲಿ ಎರಡನೇ ದಿನವಾಗಿರುವ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ ಕಮತಗಿ ವಿಶ್ವವಿದ್ಯಾಲಯ ಮಟ್ಟದ ರಾಷ್ಟ್ರೀಯ ಸೇವಾ ಯೋಜನೆಯ ಪ್ರಶಸ್ತಿ ಪುರಸ್ಕೃತರು ಆಗಿರುವ ಇವರು ರಾಷ್ಟ್ರೀಯ ಸೇವಾ ಯೋಜನೆಯ ಇಂತಹ ಶಿಬಿರಗಳು ರಾಷ್ಟ್ರವನ್ನು ಕಟ್ಟುವಂತಹ ತಾಣಗಳು ರಾಷ್ಟ್ರದಲ್ಲಿನ ಒಡಕುಗಳನ್ನ ರಾಷ್ಟ್ರದಲ್ಲಿರುವಂತಹ ಜಾತಿ ಧರ್ಮಗಳ ಮಧ್ಯೆ ಇರುವಂತಹ ಬಿರುಕುಗಳನ್ನ ಒಂದು ಮಾಡಿ, ಈ ದೇಶವನ್ನು ಕಟ್ಟುವಂತಹ ಶಕ್ತಿ ಇರುವಂತದ್ದು ಈ ರಾಷ್ಟ್ರೀಯ ಸೇವಾ ಯೋಜನೆಗೆ ಈ ದೇಶದಲ್ಲಿರುವಂತಹ ಒಡಕುಗಳಿಗೆ ಈ ದೇಶದಲ್ಲಿರುವಂತಹ ಆಸಹಿಷ್ಣುತೆಗೆ ಈ ದೇಶದಲ್ಲಿರುವಂತಹ ಭಿನ್ನತೆಗೆ ಪ್ರಮುಖವಾಗಿರುವಂತಹ ಕಾರಣ ಮಾನವನ ಸ್ವಾಭಾವಿಕ ಚಟುವಟಿಕೆ ಒಬ್ಬರನ್ನೊಬ್ಬರು ದ್ವೇಷಿಸುವುದು ಹಿಂದುಗಳನ್ನ ಮುಸ್ಲಿಮರು ದ್ವೇಷಿಸುವುದು ಮುಸ್ಲಿಮರು ಹಿಂದುಗಳನ್ನು ದ್ವೇಷಿಸುವುದು, ಮೇಲ್ಜಾತಿಯವರು ಕೆಳಜಾತಿಯವರನ್ನು ದ್ವೇಷಿಸುವುದು ಕೆಳಜಾತಿಯವರು ಮೇಲ್ಜಾತಿ ಅವರನ್ನು ದ್ವೇಷಿಸುವುದು ಇಂದು ನಡೆದಿರುವಂತದ್ದು ಆದರೆ ಯಾರೂ ಕೂಡ ಒಬ್ಬರನ್ನೊಬ್ಬರು ದ್ವೇಷಿಸುವುದಕ್ಕಾಗಿ ಹುಟ್ಟಿದವರಲ್ಲ ಎಲ್ಲರೂ ಹುಟ್ಟುವಾಗ ಸಮಾನರಾಗಿದ್ದವರಿಗೆ ದ್ವೇಷ ಮಾಡುವುದನ್ನು ಕಲಿಸಲಾಯಿತು ಆದರೆ ದ್ವೇಷ ಮಾಡುವುದನ್ನು ಕಲಿಸುತ್ತಾರೆಂದರೆ ನಾವು ಪ್ರೀತಿ ಮಾಡುವುದು ಮತ್ತು ಪರಸ್ಪರ ಗೌರವಿಸುವುದನ್ನು ಏಕೆ ಕಲಿಸಬಾರದು, ಕಾರ್ಯಕ್ರಮದ ಸಾನಿಧ್ಯವನ್ನು ಒಳ ಬಳ್ಳಾರಿ ಚನ್ನಬಸವ ಸ್ವಾಮಿಜಿ ಅವರು ವಹಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎನ್ ವೀರೇಶ್ ಎನ್ ವೀರೇಶ್ ಚಲನ ಚಿತ್ರ ನಟರು ಎನ್ ಷಣ್ಮುಖ ಗೌಡ ಸದಸ್ಯರು ಶರಣಬಸವೇಶ್ವರ ದೇವಸ್ಥಾನ ಸಮಿತಿ, ಡಾ.ವೆಂಕಟನಾರಾಯಣ ಎಂ ಪ್ರಾಧ್ಯಾಪಕರು ಸರಕಾರಿ ಮಹಾವಿದ್ಯಾಲಯ ಸಿಂಧನೂರು, ಎಂ ಸರಣಿ ಗೌಡ ಖಜಾಂಚಿಗಳು ಶರಣಬಸವೇಶ್ವರ ದೇವಸ್ಥಾನ ಸಮಿತಿ, ಆರ್‌ಸಿ ಪಟೀಲ್ ಕಾರ್ಯದರ್ಶಿ ಪಟೀಲ್ ಶಿಕ್ಷಣ ಸಂಸ್ಥೆ ಸಿಂಧನೂರು, ಟಿ. ದೇವರಾಜ್ ಗೌಡ ಅಧ್ಯಕ್ಷರು ಶರಣಬಸವೇಶ್ವರ ಸೇವಾ ಸಂಘ, ಗೋವಿಂದರೆಡ್ಡಿ ಸುಬ್ಬಣ್ಣನವರ್ ರೈತ ಮುಖಂಡರು, ಶರಣಪ್ಪ ಹೂಗಾರ್ ನಿರ್ದೇಶಕರು ವಿ ಎಸ್ ಎಸ್ ಏನ್ ಗೊರೇಬಾಳ, ಆರ್ ಬಸನಗೌಡ ರೆಡ್ಡಣ್ಣನವರ್ ಮಾಜಿ ಅಧ್ಯಕ್ಷರು ಎಸ್ ಡಿ ಎಂ ಸಿ ಸರ್ಕಾರಿ ಪ್ರೌಢಶಾಲೆ ಗೊರೇಬಾಳ, ಎನ್ಎಸ್ಎಸ್ ಅಧಿಕಾರಿ ಹೊನ್ನಪ್ಪ ಬೆಳಗುರ್ಕಿ ಪ್ರಾಂಶುಪಾಲರು ಆನಂದ ದುಮತಿ, ಉಪನ್ಯಾಸಕರಾಗಿರುವ ಹನುಮಂತರೆಡ್ಡಿ ವಾಣಿಜ್ಯಶಾಸ್ತ್ರ ಉಪನ್ಯಾಸಕರು ದೇವರಾಜ್ ಇತಿಹಾಸ ಉಪನ್ಯಾಸಕರು, ನಾಗರಾಜ್ ನಾಯಕ್ ಆಂಗ್ಲ ಭಾಷೆ ಉಪನ್ಯಾಸಕರು ಪಂಪನಗೌಡ ರಾಜ್ಯಶಾಸ್ತ್ರ ಉಪನ್ಯಾಸಕರು ಪಂಪಾಪತಿ ಇತಿಹಾಸ ಉಪನ್ಯಾಸಕರು ಸಮ್ರಿನ್ ಬೇಗಂ ಇತಿಹಾಸ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
