ಉದಯವಾಹಿನಿ ,ಹೊಸಕೋಟೆ: ತಾಲೂಕಿನನೆಲವಾಗಿಲು, ಬೈಲನರಸಾಪುರ, ತಾವರೆಕೆರೆ, ಹೆತ್ತಕ್ಕಿ, ಶಿವನಾಪುರ, ನಂದಗುಡಿ, ಇಟ್ಟಸಂದ್ರಗ್ರಾಪA. ವ್ಯಾಪ್ತಿಯ ಗ್ರಾಮಗಳಲ್ಲಿ ಪಾರಂಪರಿಕವಾಗಿ ನಡೆದು ಬಂದ ವರಮಹಾಲಕ್ಷಿö್ಮÃ ಹಬ್ಬವನ್ನು ಶ್ರದ್ಧಾ ಭಕ್ತಿಯೊಂದಿಗೆಆಚರಿಸಲಾಯಿತು.
ಶ್ರಾವಣ ಮಾಸದ ೨ನೇ ಶುಕ್ರವಾರ ಸಂಪತ್ತಿನಅದೇವತೆಶ್ರೀ ವರಮಹಾಲಕ್ಷಿö್ಮÃಯನ್ನು ಹಬ್ಬದಆಚರಣೆಯ ಸಂಭ್ರಮದಲ್ಲಿ ಲಕ್ಷಿö್ಮÃ ವ್ರತಅರಾಧಿಸಲು ಸುಮಂಗಲೆಯರು ಬಣ್ಣ-ಬಣ್ಣದ ಸೀರೆಯನ್ನುಟ್ಟು ಅಕ್ಷರಶಃ ಲಕ್ಷಿö್ಮÃಯಂತೆ ಕಂಗೊಳಿಸುತ್ತಾ ಲವಲವಿಕೆಯಿಂದಓಡಾಡುತ್ತಿರುವದೃಶ್ಯಕAಡು ಬಂದಿತ್ತು.
ತಳಿರು ತೋರಣಗಳಿಂದ ಅಲಂಕೃತವಾದ ಪೀಠದಲ್ಲಿ ಕಳಸವಿಟ್ಟು ಲಕ್ಷಿö್ಮÃದೇವಿಯನ್ನು ಪ್ರತಿಷ್ಠಾಪಿಸಿ, ವಿವಿಧ ಬಗೆಯ ಹೂಗಳು, ಅಭರಣ, ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿ, ಲಕ್ಷಿö್ಮÃಯೊಂದಿಗೆ ಹಣ, ಅಭರಣಗಳನ್ನು ಅಲಂಕರಿಸಿ ಮನೆಯಲ್ಲಿ ಸಿರಿ, ಸಂಪತ್ತು, ಸುಖ, ಸಮೃದ್ಧಿಯಾಗಿ ಲಕ್ಷಿö್ಮÃಯೂ ಸದಾ ಮನೆಯಲ್ಲಿ ನೆಲೆಸಿರಲೆಂದು ಪೂಜಿಸುವುದು ವಾಡಿಕೆಯಾಗಿದೆ. ಹಬ್ಬದ ಪ್ರಯುಕ್ತ ಪುರುಷರು, ಮಕ್ಕಳು, ಹೆಂಗಳೆಯರು ಶುಚಿಭೂತರಾಗಿ ಹೊಸ ಬಟ್ಟೆತೊಟ್ಟು, ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ವಿಶೇಷ ಭಕ್ಷö್ಯ ಭೋಜನ ತಯಾರಿಸಿ, ನೆರೆ ಹೊರೆಯ, ನೆಂಟರಿಷ್ಠರು ಸುಮಂಗಲೆಯರನ್ನು ಕುಂಕುಮಕ್ಕೆ ಅಹ್ವಾನಿಸಲು ತರುಣಿಯರು ವಿಶೇಷವಾಗಿ ಅಲಂಕರಿಸಿಕೊAಡು, ಲಕ್ಷಿö್ಮÃಯೇ ನಾಚುವಂತೆ ಸಿಂಗಾರಗೊAಡಿದ್ದರು.
ಹಲವರು ಬೆಳಗಿನ ಜಾವವೇ ಲಕ್ಷಿö್ಮÃಯನ್ನು ಕೂರಿಸಿದರೆ, ಇನ್ನೂ ಕೆಲವರು ಸಂಜೆಕೂರಿಸಲು ಸಿದ್ಧತೆ ನಡೆಸುತ್ತಿದ್ದರು. ಮನೆಯಲ್ಲಿ ಲಕ್ಷಿö್ಮಯನ್ನುಕೂರಿಸುವ ಪದ್ದತಿಯಿಲ್ಲದವರು ಹತ್ತಿರದ ದೇವಾಲಯಗಳಿಗೆ ತೆರಳಿ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡುದೇವರದರ್ಶನ ಪಡೆದುಧನ್ಯತಾ ಭಾವ ಪ್ರದರ್ಶಿಸಿದರು.
ವಿವಿಧ ದೇವಾಲಯಗಳಲ್ಲಿ ವಿಶೇಷವಾಗಿ ಶಕ್ತಿ ಸ್ವರೂಪಿಣಿ ದೇವಸ್ಥಾನಗಳಲ್ಲಿ ಶ್ರೀವರಮಹಾಲಕ್ಷಿö್ಮÃ ಹಬ್ಬದ ಪ್ರಯುಕ್ತ ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು.ಮುAಜಾನೆಯಿAದಲೇಅಭಿಷೇಕ ಸೇರಿದಂತೆ ನಾನಾ ಬಗೆಯ ಪೂಜಾ ಕೈಂಕರ್ಯಗಳು ನಡೆಸಲಾಯಿತು.ಎಲ್ಲೆಡೆ ಹಬ್ಬದ ಸಡಗರ ಸಂಭ್ರಮಕAಡು ಬಂತು.

 

Leave a Reply

Your email address will not be published. Required fields are marked *

error: Content is protected !!