ಉದಯವಾಹಿನಿ,ಮುದ್ದೇಬಿಹಾಳ : ತನ್ನ ತಾಯಿ ಸುನಂದ ದಡ್ಡಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದು ಅವರನ್ನು ಮಾರುತಿ ನಗರದ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ನೇಮಕ ಮಾಡಬೇಕು ಎಂದು ಆಗ್ರಹಿಸಿ ಪ್ರವೀಣ ಚಿನಿವಾರ ತನ್ನ ತಾಯಿಗೂಸ್ಕರ ತಹಶಿಲ್ದಾರ ಕಚೇರಿಯ ಆವರಣದಲ್ಲಿ ಉಪವಾಸ ಸತ್ಯಾಗ್ರಹವನ್ನು ಗುರುವಾರದಿಂದ ಆರಂಭಿಸಿದ್ದಾರೆ
ತನ್ನ ತಾಯಿ ಸುನಂದಾ ದಡ್ಡಿ ಮಾರುತಿ ನಗರ ನಿವಾಸಿಯಾಗಿದ್ದು ಇಲ್ಲಿಂದ ಪ್ರತಿನಿತ್ಯ ಪಟ್ಟಣದ ತಾಳಿಕೋಟೆ ರಸ್ತೆಯ ಆಶ್ರಯ ಕಾಲೋನಿಯ ಅಂಗನವಾಡಿ ಕೇಂದ್ರ ನಂ ೨ ಕ್ಕೆ ನಡೆದುಕೊಂಡು ಹೋಗುತ್ರಾರೆ ಸದ್ಯ ಅವರ ಆರೋಗ್ಯ ಸರಿ ಇಲ್ಲ ಹೀಗಾಗಿ ಅವರನ್ನು ಅಂಗನವಾಡಿ ಇಲಾಖೆಯ ನಿಯಮಾವಳಿಯಂತೆ ಆಯಾ ಬಡಾವಣೆಯ ಅಂಗನವಾಡಿಗಳಲ್ಲಿ ಸ್ಥಳೀಯರನ್ನು ನೇಮಕ ಮಾಡಿಕೊಳ್ಳಬೇಕು ಎಂದು ನಿಯಮವಿದೆ ಅದರಂತೆ ಮಾರುತಿ ನಗರದಲ್ಲಿನ ಅಂಗನವಾಡಿ ಕೇಂದ್ರ ಕ್ಕೆ ನಮ್ಮ ತಾಯಿವರನ್ನು ಆಶ್ರಯ ಕಾಲೋನಿಯಿಂದ ಸ್ಥಾನ ಪಲ್ಲಟ ಮಾಡಬೇಕು ಎಂದು ಈಗಾಗಲೇ ಹಲವಾರು ಬಾರಿ ಮನವಿಯನ್ನು ನಮ್ಮ ತಾಯಿ ಮನವಿಯನ್ನು ಸಲ್ಲಿಸಿದರು ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಇಲಾಖೆಯ ನಿಯಮಾವಳಿಯಂತೆ ಈಗಾಗಲೇ ಅನೇಕ ಅಂಗನವಾಡಿ ಕಾರ್ಯಕರ್ತೆಯರ ಸ್ಥಾನ ಪಲ್ಲಟ ಮಾಡಿದ್ದಾರೆ ಆದರೆ ನಮ್ಮ ತಾಯಿಗೆ ಮಾತ್ರ ಈ ವಿಷಯದಲ್ಲಿ ನ್ಯಾಯ ಸಿಕ್ಕಿಲ್ಲ ಅಂಗನವಾಡಿ ಇಲಾಖೆಯ ಈ ತಾರತಮ್ಯ ವಿಳಂಬ ನೀತಿಯನ್ನು ವಿರೋಧಿಸಿ ಅನ್ನ ನೀರು ಸೇವಿಸದೆ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾಗಿ ಅವರು ತಿಳಿಸಿದರು
ಪ್ರವೀಣ ಚಿನಿವಾರ ಉಪವಾಸ ಸತ್ಯಾಗ್ರಹ ಈಗ ಮೂರನೇ ದಿನಕ್ಕೆ ಕಾಲಿಟ್ಟಿದೆ

Leave a Reply

Your email address will not be published. Required fields are marked *

error: Content is protected !!