ಉದಯವಾಹಿನಿ, ಸಿರುಗುಪ್ಪ : ನಗರದ ಕಂದಾಯ ವಸತಿಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ವೆಂಕಟೇಶ ಎನ್ನುವ ಗೌರವ ಶಿಕ್ಷಕರು ಸಂಬಳಕ್ಕೆ ಮಾತ್ರ ಹಾಜರಾಗುತ್ತಿದ್ದರೂ ಸಂಬAದಿಸಿದ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆAದು ಪೋಷಕರಿಂದ ಆರೋಪ ವ್ಯಕ್ತವಾಯಿತು. ಸಾರ್ವಜನಿಕ ಹಿತದೃಷ್ಟಿಯಿಂದ ವೇಳೆ ಮುಖ್ಯೋಪಾಧ್ಯಾಯಿನಿ ಎನ್.ಮಂಜುಳಾ ಅವರನ್ನು ವಿಚಾರಿಸಲೆಂದು ಶಾಲೆಗೆ ತೆರಳಿದ ವರದಿಗಾರರನ್ನು ನನ್ನ ಬಗ್ಗೆ ಪ್ರಶ್ನಿಸುವ ಅಧಿಕಾರ ಯಾರು ಕೊಟ್ಟಿದ್ದಾರೆಂದು ಏಕವಚನದಲಿ ನನ್ನ ಮೇಲೆ ವಿಚಾರಣೆ ಮಾಡುತ್ತಿರುವಿರಾ?
ನಿಮಗೆ ಕಾದಿದೆಂದು ಪತ್ರಕರ್ತರಿಗೆ ಬೆದರಿಕೆ ಹಾಕಿದರಲ್ಲದೇ ನಿಮ್ಮನ್ನು ನೋಡಿಕೊಳ್ಳುತ್ತೇನೆಂದು ಚಿತ್ರೀಕರಣ ಮಾಡುವ ವೇಳೆ ಮೊಬೈಲ್ ಕಸಿಯುವ ಯತ್ನ ಮಾಡಿದರಲ್ಲದೇ ಪತ್ರಿಕಾ ಕಾರ್ಯಕ್ಕೆ ಅಡ್ಡಿಪಡಿಸಲೆತ್ನಿಸಿದರು.
ಪಾಠ ಮಾಡಲು ಮತ್ತು ಶಿಸ್ತು ಕಲಿಸಲೆಂದು ಗೌರವಯುತವಾಗಿ ಅವರಿಗೆ ಸಂಬಳ ನೀಡುತ್ತಿರುವ ಸರ್ಕಾರಕ್ಕೆ ದ್ರೋಹ ಬಗೆಯುತ್ತಿರುವುದು, ಪತ್ರಕರ್ತರಿಗೂ ಬೆದರಿಕೆ ಹಾಕುತ್ತಿರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಗರ‍್ರಪ್ಪ ಅವರ ಗಮನಕ್ಕೆ ತಂದರೂ ನಮಗೆ ಸೂಕ್ತ ಮಾಹಿತಿಯಿಲ್ಲ ಕರೆಯಿಸಿ ವಿಚಾರಣೆ ನಡೆಸುವುದಾಗಿ ಹಾರಿಕೆ ಉತ್ತರ ನೀಡಿದರು.
ಈ ರೀತಿ ಹಲವು ವರ್ಷಗಳಿಂದಲೂ ಸ್ವಲ್ಪ ಸಮಯ ಮಾತ್ರ ಶಾಲೆಯಲ್ಲಿದ್ದು ನಂತರ ಪತ್ರಿಕೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ರಾಜಕೀಯ ಪ್ರತಿನಿಧಿಗಳು, ಗಣ್ಯವ್ಯಕ್ತಿಗಳು ಮೇಲಾಧಿಕಾರಿಗಳೊಂದಿಗೆ ಬಹು ಸಮಯ ಕಳೆಯುತ್ತಿರುವ ಇಂತಹ ವ್ಯಕ್ತಿಗಳು ಇಲಾಖೆಯಲ್ಲಿ ಉನ್ನತ ಅಧಿಕಾರಿಯಂತೆ ದಬ್ಬಾಳಿಕೆ ನಡೆಸುತ್ತಿರುವುದು ಕಂಡುಬAದಿದೆ. ಇಂತಹವರ ಅಗೌರವದ ನಡೆಯನ್ನು ಮೇಲಾಧಿಕಾರಿಗಳು ಗಮನಿಸಿ ಸೂಕ್ತ ಕ್ರಮ ಕೈಗೊಂಡು ಶಿಸ್ತು ಮತ್ತು ಗೌರವಕ್ಕೆ ಹೆಸರಾದ ಶಿಕ್ಷಣ ಇಲಾಖೆಗೆ ಮಸಿ ಬಳಿಯುವುದನ್ನು ತಡೆದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಬೇಕೆಂದು ಪೋಷಕರು ಒತ್ತಾಯಿಸಿದರು. ೨೫-ಸಿರುಗುಪ್ಪ-೧ : ಸರ್ಕಾರಿ ಶಾಲೆಯಲ್ಲಿ ಸಂಬಳದ ಶಿಕ್ಷಕ ಸಾರ್ವಜನಿಕ ವಲಯದಲ್ಲಿ ಪತ್ರಕರ್ತರೆನೆಂದು ಬಿಂಬಿಸಿಕೊಳ್ಳುತ್ತಿರುವ ವೆಂಕಟೇಶ ಅವರ ಭಾವಚಿತ್ರ.

Leave a Reply

Your email address will not be published. Required fields are marked *

error: Content is protected !!