ಉದಯವಾಹಿನಿ, ಸುರಪುರ : ಪ್ರೊಪೆಸರ್ ಬಿ. ಕೃಷ್ಣಪ್ಪನವರ ಸ್ಥಾಪಿತ ದಲಿತ ಸಂಘರ್ಷ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕರು ನಿಂಗಣ್ಣ ಗೋನಾಳ್ ದಲಿತ ಹಿಂದುಳಿದ ಅಲ್ಪಸಂಖ್ಯಾತರು ಸಂವಿಧಾನಾತ್ಮಕವಾದ ಹಕ್ಕುಗಳನ್ನು ಪಡೆಯಲು ನಿರಂತರ ಹೋರಾಟ ನಡೆಸುತ್ತಿದ್ದು. ಸಂಘಟನೆಯನ್ನು ಬಲಪಡಿಸಲು ಯುವಕರ ಪಾತ್ರ ಬಹು ಮುಖ್ಯವಾಗಿದೆ, ಯುವಕರು ಶಿಕ್ಷಣವಂತರಾಗಬೇಕು, ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಕುಡಿದವರು ಗರ್ಜಿಸಲೇಬೇಕು ಎಂದು ಹೇಳಿದರು. ನೂತನ ಜಿಲ್ಲಾ ಪದಾಧಿಕಾರಿಗಳಾಗಿ ಹಣಮಂತ ಕೆ ಅಮಾಪುರ್ ಸಾಯಬಣ್ಣ ಗೋನಾಲ್ ಎಚ್ ಆರ್ ಬಡಿಗೇರ್ ಕೆಂಭಾವಿ ಧರ್ಮಣ್ಣ ಚಿಂಚೋಳ್ಳಿ ಭೀಮರಾಯ ಕರಕಳ್ಳಿ ಹಾಗೂ ನೂತನ ಜಿಲ್ಲಾ ಸಂಘಟನಾ ಸಂಚಲಕರನ್ನಾಗಿ ಆಯ್ಕೆ ಮಾಡಿದರು. ಈ ಸಂದರ್ಭದಲ್ಲಿ ಸಾಯಬಣ್ಣ ಎಂಟಮನ್, ಸದಾಶಿವ ಬೊಮ್ಮನಹಳ್ಳಿ, ನಾಗು ಗೋಗಿಕೆರ, ಗೋಪಾಲ್, ರಮೇಶ್ ಪೂಜಾರಿ, ಮಲ್ಲು ವಜ್ಜಲ್, ಚಂದಪ್ಪ ಕಕ್ಕೇರಾ ಹಾಗೂ ಇತರರು ಇದ್ದರು.
