ಉದಯವಾಹನಿ, ಇಂಫಾಲ್: ಮಣಿಪುರದಲ್ಲಿ ನಾಳೆ (ಆ.29) ನಡೆಯಲಿರುವ ವಿಧಾನಸಭೆಯ ಒಂದು ದಿನದ ಅಧಿವೇಶನವನ್ನು ಬುಡಕಟ್ಟು ಸಮುದಾಯದ ಸಂಘಟನೆಗಳು ಖಂಡಿಸಿವೆ.
ಹದಗೆಟ್ಟ ಕಾನೂನು-ಸುವ್ಯವಸ್ಥೆ, ಸಾಮಾನ್ಯ ಜನರ ಮತ್ತು ಅಧಿಕಾರಿಗಳ ಜೀವ ರಕ್ಷಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದನ್ನು ಪರಿಗಣಿಸಿದರೆ, ಅಧಿವೇಶನವನ್ನು ಕರೆಯುವುದರಲ್ಲಿ ಯಾವ ತರ್ಕವೂ ಇಲ್ಲ ಎಂದು ‘ದಿ ಕಮಿಟಿ ಆನ್ ಟ್ರೈಬಲ್ ಯೂನಿಟಿ (ಸಿಒಟಿಯು) ಮತ್ತು ಇಂಡಿಜೀನಿಯಸ್ ಟ್ರೈಬಲ್ ಲೀಡರ್ಸ್ ಫೋರಮ್ (ಐಟಿಎಲ್‌ಎಫ್)’ ಆಕ್ರೋಶ ವ್ಯಕ್ತಪಡಿಸಿವೆ.ಮಂಗಳವಾರ ಒಂದು ದಿನದ ಅಧಿವೇಶನವನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಮಣಿಪುರ ವಿಧಾನಸಭೆಯ ವ್ಯವಹಾರಗಳ ಸಲಹಾ ಸಮಿತಿ ಶನಿವಾರ ತಿಳಿಸಿತ್ತು.
