
ಉದಯವಾಹಿನಿ ಸಿಂಧನೂರು:ಕರ್ನಾಟಕ ರೈತ ಸಂಘ (AIKKS) ದ ನೇತೃತ್ವದಲ್ಲಿ ಸಿಂಧನೂರ ತಾಲ್ಲೂಕಿನ ಸಾಲಗುಂದ ಹೊಬಳಿಯ ಸೋಮಲಾಪುರ ಗ್ರಾಮದ(ಬೂದಿವಾಳ ಕ್ಯಾಂಪ್) ಸಂ.ನಂ.71/*/ಹಿಸ್ಸಾ 3 ಸರ್ಕಾರಿ ಭೂಮಿಯಲ್ಲಿ ಬಡವರಿಗೆ ನಿವೇಶನ ಹಂಚಿಕೆ ಒತ್ತಾಯಿಸಿ ಭೂಮಿಯಲ್ಲಿ ಧರಣಿ ಸತ್ಯಾಗ್ರಹ ಚಳವಳಿ ನಡೆಸಲಾಯಿತು.ಧರಣಿ ಕುರಿತು ಮಾತನಾಡಿದ ರಾಜ್ಯ ರೈತ ಸಂಘದ ರಾಜ್ಯಧ್ಯಕ್ಷರಾದ ಡಿ ಎಚ ಪೂಜಾರಿ ಅವರು. ಬೂದಿವಾಳ ಕ್ಯಾಂಪಿನ ಆಂದ್ರದ ವ್ಯಕ್ತಿ ಖಾಸಗಿ ಅಗ್ರಿಮಂಟ್ ಮಾಡಿಕೊಂಡು ಕೋರ್ಟ್ ಮೋರೆ ಹೋಗಿದ್ದಾನೆ. ಸಿಂಧನೂರ ತಹಶೀಲ್ದಾರರು ಸರಿಯಾದ ದಾಖಲಾತಿ ಸಲ್ಲಿಸಿದ್ದರೆ ಕೇಸ್ ವಜಾಗೊಳ್ಳುತಿತ್ತು.ಆದರೆ ಅಧಿಕಾರಿಗಳು ಭೂಗಳ್ಳರೊಂದಿಗೆ ಶಾಮೀಲಾಗಿದ್ದರಿಂದ ಪ್ರಕರಣ ಕೋರ್ಟಿನಲ್ಲಿ ಮುಂದುವರೆಯಲು ಕಾರಣವಾಗಿದೆ ಎಂದು ಹೇಳಿದರು
ಕರ್ನಾಟಕ ರೈತ ಸಂಘ (KRS-AIKKS) ಕಳೆದ 10 ವರ್ಷಗಳಿಂದ ಅನೇಕ ಸುತ್ತಿನ ಹೋರಾಟ ನಡೆಸಿದೆ.ಆದರೆ ಅಧಿಕಾರಿಗಳು ಕರ್ತವ್ಯ ದ್ರೋಹವೆಸಗಿದ್ದಾರೆ.ಸಿಂಧನೂರ ತಹಸೀಲ್ದಾರರು ಇತರೆ ಕಂದಾಯ ಅಧಿಕಾರಿಗಳು ಕೋರ್ಟಿಗೆ ಸರಿಯಾದ ದಾಖಲಾತಿಗಳನ್ನು ಸಲ್ಲಿಸದ ಕಾರಣ ತಾಲೂಕಿನ ಅನೇಕ ಗ್ರಾಮಗಳ ನೂರಾರು ಎಕರೆ ಸರ್ಕಾರಿ ಭೂಮಿ ಭೂಗಳ್ಳರ ಪಾಲಾಗಿದೆ ಎಂದು ಅಧಿಕಾರಿಗಳು ವಿರುದ್ಧ ವಾಗ್ದಾಳಿ ನಡೆಸಿದರು.
ರೌಡಕುಂದ ಗ್ರಾಮದ ಸಂ.ನಂ.244 ಸರ್ಕಾರಿ ಇನಾಮ್ ಭೂಮಿಗೆ ಸಂಬಂಧಿಸಿದ ದಾಖಲಾತಿಗಳನ್ನು (ಗುಲ್ಬರ್ಗ ಹೈ ಕೋರ್ಟಿಗೆ) ಸಲ್ಲಿಸದ ಕಾರಣ 32 ಎಕರೆ ಭೂಮಿ ಗೋರೆಬಾಳ ಗ್ರಾಮದ ಸಿದ್ದರಾಮೇಶ ಸ್ವಾಮಿಯ ಪಾಲಾಗಿದೆ.ತಾಲ್ಲೂಕಿನ ಹಲವು ಭೂ ಮಾಫಿಯಗಳು ಮತ್ತು ಬಲಿಷ್ಠರು, ಸರ್ಕಾರಿ ಭೂಮಿಗೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಕೋಟ್ಯಂತರ ಬೆಲೆ ಬಾಳುವ ನೂರಾರು ಎಕರೆ ಭೂಮಿಯನ್ನು ಕಬಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರಿಗೆ ಹೋರಾಟ ಮುಂದುವರಿಯುತ್ತದೆ.ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯ ಇವರು ಇದೆ ಸಪ್ಟಂಬರ ಮೊದಲ ವಾರ ಸಭೆ ಕರೆದಿದ್ದಾರೆ. ಜಿಲ್ಲಾಡಳಿತ ಈ ವಿಷಯವನ್ನು ಗಂಭೀರ ಪರಿಗಣಿಸಲು ಒತ್ತಾಯಸುತ್ತವೆ.ಧರಣೆ ಹೋರಾಟದಲ್ಲಿ ಕರ್ನಾಟಕ ರೈತ ಸಂಘ (AIKKS), ಜಿಲ್ಲಾ ಕಾರ್ಯದರ್ಶಿಯಾದ ಬಿ.ಎನ್.ಯರದಿಹಾಳ, ತಾಲೂಕ ಅಧ್ಯಕ್ಷ ರಮೇಶ ಪಾಟೀಲ, ಉಪಾಧ್ಯಕ್ಷ ಚಿಟ್ಟಿಬಾಬು, ಮಸ್ಕಿ ತಾಲ್ಲೂಕ ಕಾರ್ಯದರ್ಶಿಯಾದ ಮಹ್ಮದ್ ಖಾಜಾ ಶೆಟ್ಟಿ,ಉಪಾಧ್ಯಕ್ಷರಾದ ಯಮನೂರಪ್ಪ, ms ರಾಜಶೇಖರ, ಲಿಂಗಪ್ಪ ಚಿಕ್ಕ ಬೇರ್ಗಿ,ವೀರೇಶ ಬೇರಿಗಿ,ಅಂಬಮ್ಮ,ಯಲ್ಲಮ್ಮ,ಜಯಫ್ಫ ನಾಗಮ್ಮ, ಹೊನ್ನಮ್ಮ ಪ್ರತ್ವೀರಾಜ. ಕಾಶಿ ವಿಶ್ವನಾಥ, ಸೇರಿದಂತೆ ಇತರರು ಉಪಸ್ಥಿತರಿದ್ದರು
