
ಉದಯವಾಹಿನಿ ದೇವರಹಿಪ್ಪರಗಿ: ಮನೆ ಒಡತಿಗೆ ಪ್ರತಿ ತಿಂಗಳು ₹2,000 ನೀಡುವ ಗೃಹಲಕ್ಷ್ಮಿ ಯೋಜನೆಗೆ ಬುಧವಾರ ಪಟ್ಟಣದ 1008 ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ವೀಕ್ಷಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಕುಟುಂಬ ಯಜಮಾನಿಗೆ ಪ್ರತಿ ತಿಂಗಳು ತಲಾ ₹2000 ನೀಡುವ ‘ಗೃಹಲಕ್ಷ್ಮಿ’ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ ಎಂದರು. ಪ ಪಂ ಅಧಿಕಾರಿಗಳು ಗೃಹಲಕ್ಷ್ಮಿ ಯೋಜನೆಯ ಕಾರ್ಯಕ್ರಮ ನೇರ ಪ್ರಸಾರದ ವೀಕ್ಷಣೆಗೆ ಮಾಡಲು ವ್ಯವಸ್ಥೆ ಮಾಡಿಕೊಂಡಿದ್ದರು. ಪ್ರಾಸ್ತಾವಿಕವಾಗಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರು ಮಾತನಾಡಿ, ಒಟ್ಟು ತಾಲೂಕಿನಲ್ಲಿ 27550 ಆಹಾರ ಇಲಾಖೆಯ ಪಡಿತರ ಚೀಟಿ ಆಧಾರದಲ್ಲಿ ಫಲಾನುಭವಿಗಳು ನೋಂದಣಿಯಾಗಿದ್ದಾರೆ. ನೋಂದಣಿಯಾದ ಫಲಾನುಭವಿಗಳು 23230 ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ಶೇ.84.32 ರಷ್ಟು ಸಾಧನೆಗೈದಿದ್ದೇವೆ. ಅದರಲ್ಲೂ ಪಟ್ಟಣದಲ್ಲಿ 5121 ಜನ ಫಲಾನುಭವಿಗಳಲ್ಲಿ 4,283 ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ಶೇ.83.63 ರಷ್ಟು ಸಾಧನೆಗೈದಿದ್ದೇವೆ. ಮುಂಬರುವ ದಿನಗಳಲ್ಲಿ ಅರ್ಜಿ ಸಲ್ಲಿಸದವರು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಯಾವುದೇ ಅಂತಿಮ ದಿನಾಂಕ ಇಲ್ಲ ಎಂದರು. ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರ, ಪ.ಪಂ ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ, ಸಿಡಿಪಿಒ ಕಚೇರಿ ಅಧಿಕಾರಿ ಎಸ್.ಎನ್. ಕೋರವಾರ,ಉಪತಹಶೀಲ್ದಾರ್ ಗಳಾದ ಮಹಿಪತಿ ದೇಸಾಯಿ, ಇಂದಿರಾ ಬಳಗನೂರ, ಪ ಪಂ ಸದಸ್ಯರುಗಳಾದ ಕಾಸುಗೌಡ ಬಿರಾದಾರ ಜಲಕತ್ತಿ, ಕಾಶೀನಾಥ ಜಮಾದಾರ, ಶಾಂತಯ್ಯ ಜಡಿಮಠ, ಉಮೇಶ ರೂಗಿ, ರಮೇಶ ಮಸಿಬಿನಾಳ, ಕಾಶೀನಾಥ ಭಜಂತ್ರಿ, ಮಂಗಳೇಶ ಕಡ್ಲೆವಾಡ, ಸೋಮು ದೇವೂರ, ವಿನೋದ ಚವ್ಹಾಣ, ಸಿಂಧೂರ ಡಾಲೇರ, ಸುಮಂಗಲಾ ಸೇಬೆನ್ನವರ್ ಸೇರಿದಂತೆ ತಹಶೀಲ್ದಾರ್ ಕಚೇರಿಯ, ಪ ಪಂ ಸಿಬ್ಬಂದಿ ವರ್ಗ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.
