
ಉದಯವಾಹಿನಿ ಕೆಂಭಾವಿ:ಪಟ್ಟಣದ ಸಮೀಪ ಸುಕ್ಷೇತ್ರ ಕರಡಕಲ್ ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಶಾಂತರುದ್ರಮುನಿ ಮಹಾಸ್ವಾಮಿಗಳ ೩೧ ನೆ ವರ್ಷದ ಭಾವೈಕ್ಯತಾ ಹಾಗೂ ಶೈಕ್ಷಣಿಕ ಪಾದಯಾತ್ರೆ ಆ.೩೧, ಗುರುವಾರದಂದು ಪ್ರಾರಂಭವಾಗುವದು ಎಂದು ಮಠದ ವಕ್ತಾರ ಶಿವಪ್ರಕಾಶಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ಸದ್ಗುರು ಕೋರಿಸಿದ್ದೇಶ್ವರ, ಓಂಕಾರಿ ರಾಜರಾಜೇಶ್ವರಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಪ್ರಾರಂಭವಾಗಲಿದ್ದು ಈ ಪಾದಯಾತ್ರೆಯಲ್ಲಿ ವಿಶೇಷ ಕಲಾ ತಂಡಗಳು, ಡೊಳ್ಳು ಕುಣಿತ, ಶಾಲಾ ಮಕ್ಕಳ ಲೇಜಿಮ್, ವಿಶೇಷ ವೇಷಧಾರಿಗಳು ಪಾಲ್ಗೊಳ್ಳಲಿದ್ದಾರೆ. ಸತತ ಐದು ದಿನಗಳ ಪಾದಯಾತ್ರೆಯ ನಂತರ ಗುರುಕ್ಷೇತ್ರ ನಾಲವಾರ ತಲುಪಿ ಡಾ.ಚನ್ನ ತೋಟೇಂದ್ರ ಶಿವಾಚಾರ್ಯರ ಇಷ್ಟಲಿಂಗ ಗುರುಪಾದ ಪೂಜೆಯಲ್ಲಿ ಭಕ್ತರ ಸಮೇತ ಪೂಜ್ಯ ಕರಡಕಲ್ ಶ್ರೀಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ
