ಉದಯವಾಹಿನಿ ಕೆಂಭಾವಿ : ವಿಪ್ರರು ಜನಿವಾರವನ್ನು ಬೇರೆ ಕಾರಣಗಳ ಹೊರತಾಗಿಯೂ ವರ್ಷಕ್ಕೊಮ್ಮೆ ಬದಲಾಯಿಸುವ ಸಂಪ್ರದಾಯವಿದೆ ಹಾಗೆಯೇ ಜನಿವಾರವನ್ನು ಬದಲಾಯಿಸುವ ದಿನವನ್ನು ಶ್ರಾವಣಿ ಎನ್ನುತ್ತಾರೆ ಎಂದು ವಲ್ಲಭಟ್ಟ್ ಜೋಶಿ ತಿಳಿಸಿದರು. ಅವರು ಪಟ್ಟಣದ ಕಲಬುರ್ಗಿ ಜಿಲ್ಲಾ ಹಣಕಾಸು ಇಲಾಖೆ ಉಪನಿರ್ದೇಶಕ ಶ್ರೀಪಾದಭಟ್ಟ ಜೋಶಿ ಅವರ ಮನೆಯಲ್ಲಿ ನಡೆದ ಋಗ್ವೇದಿಯ ಶ್ರಾವಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶ್ರಾವಣಮಾಸದ ಶುಕ್ಲ ಪಕ್ಷದ ಶ್ರವಣ ನಕ್ಷತ್ರ ಅಥವಾ ನೂಲು ಹುಣ್ಣಿಮೆಯೆಂದು ಉಪಕರ್ಮವನ್ನು ಆಚರಿಸಲಾಗುತ್ತದೆ ಎಂದು ಹೇಳಿದ್ದು ಋಷಿಗಳ ಆಹ್ವಾನ ಮಾಡಿ ಅವರಿಗೆ ಶ್ರಧ್ದಾ ಭಕ್ತಿಯಿಂದ ಶೊಡಶೋಪಚಾರ ಪೂಜೆ ಮಾಡಿ ಜನಿವಾರಗಳಿಗೆ ಪೂಜೆ ಮಾಡಿ ಆಚಾರ್ಯರಿಗೆ ಮತ್ತು ಹಿರಿಯರಿಗೆ ಯಥಾ ಶಕ್ತಿ ದಕ್ಷಿಣೆಗಳನ್ನು ಕೊಡುವ ಸಂಪ್ರದಾಯವಿದೆ. ಸ್ಮಾರ್ತ ಶ್ರೌತ ನಿತ್ಯ ನೈಮಿತ್ತಿಕ ಕರ್ಮಾನುಷ್ಟಾನ ಯೋಗ್ಯತಾ ಸಿದ್ದರ್ಥ್ಯಂ ಎಂದು ಸಂಕಲ್ಪ ಮಾಡಿ ಬ್ರಹ್ಮ ವಿಷ್ಣು ಮಹೇಶ್ವರ ಈ ಮೂವರು ದೇವತೆಗಳ ಹೆಸರಿನಲ್ಲಿ ಯಜ್ಞೋಪವಿತ ಧಾರಣ ಮಂತ್ರವನ್ನು ಕರ ಷಡಂಗ ವಿನ್ಯಾಸ ಪೂರ್ವಕ ಮಂತ್ರ ಹೇಳಿ ಧರಿಸಲಾಗುವುದು. ಎಂದು ತಿಳಿಸಿ ಯಜ್ಞೋಪವಿತವು ಆಯುಷ್ಯವನ್ನು ಹೆಚ್ಚಿಸುವುದು ಮನುಷ್ಯತ್ವವನ್ನು ಶುಭ್ರ ಮಾಡುವಂಥದ್ದು ಯಜ್ಞೋಪವಿತ ನಮ್ಮ ಬಲ ಮತ್ತು ತೇಜಸ್ಸು ಹೆಚ್ಚಿಸುಗಂತಹದ್ದು ಎಂದು ಹೇಳಿದರು. ಕಾರ್ಯಕ್ರಮವು ರಾಘವೇಂದ್ರಾಚರ್ಯ ಜೋಶಿ ಮಳ್ಳಿ ಇವರ ಪೌರೋಹಿತ್ಯದಲ್ಲಿ ಹೋಮ ಹವನಗಳು ನೆರವೇರಿತು. ಈ ಸಂದರ್ಭದಲ್ಲಿ ಜಯಸತ್ಯಪ್ರಮೋದ ಸೇವಾ ಸಂಘದ ಅಧ್ಯಕ್ಷ ವಾಮನರಾವ ದೇಶಪಾಂಡೆ, ನರಸಿಂಹರಾವ ಕುಲಕರ್ಣಿ, ಹಳ್ಳೆಪ್ಪಾಚಾರ್ಯ ಚನ್ನೂರ, ವೆಂಕಟೇಶ ನಾಡಿಗೇರ, ಶಾಮಸುಂದರ ನಾಡಿಗೇರ, ಮಧ್ವರಾವ ನಾಡಿಗೇರ, ಗಿರೀಶ ಭಟ್ಟ ಜೋಶಿ ಯಾಳಗಿ, ಗುಂಡುಭಟ್ಟ ಜೋಶಿ, ಶಿವಭಟ್ಟ ಜೋಶಿ, ಕೃಷ್ಣಾಜಿ ಕುಲಕರ್ಣಿ ಸೇರದಂತೆ ವಿಪ್ರ ಬಾಂಧವರೆಲ್ಲಾ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!