ಉದಯವಾಹಿನಿ ಹೊಸಕೋಟೆ :ಗೃಹಲಕ್ಷ್ಮೀ ಯೋಜನೆಯು ರಾಜ್ಯದ  ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಜಾರಿ ಮಾಡಿರುವ ಯೋಜನೆಯಾಗಿದ್ದು, ಕರ್ನಾಟಕದಾದ್ಯಂತ ಏಕಕಾಲದಲ್ಲಿ ಯೋಜನೆಯನ್ನುಅನುಷ್ಠಾನಗೊಳಿಸಲಾಗಿದೆ ಎಂದುಸಿಇಒ ಕೆ.ಎನ್. ಅನುರಾಧ ತಿಳಿಸಿದರು. ತಾಲೂಕಿನ ಮುಗಬಾಳ ಗ್ರಾಮದ ಮಧುರ ಮಾಂಗಲ್ಯಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲೂಕುಮಟ್ಟದಗೃಹಲಕ್ಷ್ಮಿಯೋಜನೆಯಚಾಲನೆ ನೇರಪ್ರಸಾರಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿ ತಿಂಗಳು ಕೂಡಾ ಮನೆಯಒಡತಿಗೆಎರಡು ಸಾವಿರರೂಪಾಯಿಆರ್ಥಿಕ ಸಹಾಯವನ್ನು ನೀಡಲಾಗುತ್ತದೆ.ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಈ ಯೋಜನೆ ರೂಪಿಸಿದೆ.ಸರ್ಕಾರವು ಕರ್ನಾಟಕದಾದ್ಯಂತ 1೦,4೦೦ ಕೇಂದ್ರಗಳಲ್ಲಿ ಏಕಕಾಲದಲ್ಲಿಅನುಷ್ಠಾನಗೊಳಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕು ಕೇ0ದ್ರ, ಪುರಸಭೆ ಸೇರಿದಂತೆ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ನೇರಪ್ರಸಾರದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಪ್ರತಿಭಾ ಶರತ್ ಬಚ್ಚೇಗೌಡ, ಜಿಲ್ಲಾ ಪಂಚಾಯಿತಿಡಿ.ಎಸ್. ರಮೇಶ್, ಜಿಲ್ಲಾ ಪಂಚಾಯಿತಿಯಯೋಜನಾ ನಿರ್ದೇಶಕ ವಿಠಲ್ ಕವಳೆ, ಮೀನುಗಾರಿಕೆಇಲಾಖೆಯ ಉಪ ನಿರ್ದೇಶಕ ನಾಗರಾಜ್, ಹೊಸಕೋಟೆ ಇ.ಓ. ಚಂದ್ರಶೇಖರ್, ತಹಶೀಲ್ದಾರ್ ವಿಜಯಕುಮಾರ್, ಸಿಡಿಪಿಒ ವಿದ್ಯಾ ವಸ್ತçದ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿರೇಖಾ, ಮುಗಬಾಳ ಗ್ರಾಪಂ. ಅಧ್ಯಕ್ಷರಾದ ಭಾಗ್ಯ, ರಮೇಶ್, ಮಂಜುಳಾ ಉಪಾಧ್ಯಕ್ಷರಾದ ನಾರಾಯಣಮ್ಮ,ಅಸ್ಮತಾಜ್,ಪದ್ಮ, ಪ್ರಕಾಶ್, ತಾಪಂನಮಾಜಿಅಧ್ಯಕ್ಷರಾದಟಿ.ಎಸ್. ರಾಜಶೇಖರ್, ಡಿ.ಟಿ. ವೆಂಕಟೇಶ್, ಉದ್ಯಮಿಗಳಾದ ಕಲ್ಕೆರೆಕೆ.ಎಸ್. ಮಹದೇವಯ್ಯ, ಎಂ.ಮ0ದೀಪ್‌ಗೌಡ, ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ ನಾರಾಯಣಸ್ವಾಮಿ,ತಾಲೂಕಿನಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಪಂ.ಸದಸ್ಯರುಹಾಗೂ ಫಲಾನುಭವಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!