
ಉದಯವಾಹಿನಿ ದೇವರಹಿಪ್ಪರಗಿ:ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗಿದ್ದು, ಪೋಷಕರು, ಶಿಕ್ಷಕರು ಹಾಗೂ ಸಮುದಾಯ ಉತ್ತಮವಾಗಿ ಬೆಳೆಸಿ ಪೋಷಿಸಬೇಕೆಂದು ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.ಪಟ್ಟಣದ ಶಾಸಕರ ಮಾದರಿ ಶಾಲಾ ಆವರಣದಲ್ಲಿ ಗುರುವಾರದಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2022-23ನೇ ಸಾಲಿನ ಸಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶರಣ ನೂಲಿ ಚಂದಯ್ಯ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ರತಿಯೊಂದು ಚಟುವಟಿಕೆಗಳನ್ನು ಸಂಭ್ರಮಿಸುವುದರಿಂದ ಬದುಕು ಹಸನಾಗುತ್ತದೆ. ಕೇವಲ ಉಪದೇಶದಿಂದ ಬದುಕು ಬದಲಾಗುವದಿಲ್ಲ. ವಿದ್ಯಾರ್ಥಿಗಳು ತಮ್ಮೊಳಗಿರುವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಮುಖ್ಯ. ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಅವಕಾಶ ವಂಚಿತರಾಗದೇ ಕೆಲವೊಮ್ಮೆ ಅವಕಾಶಗಳನ್ನು ತಾವಾಗಿಯೇ ಸೃಷ್ಟಿಸಿಕೊಳ್ಳಬೇಕು. ಕಾಲೇಜಿನ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಿ ಕ್ಷೇತ್ರ ಹಾಗೂ ರಾಜ್ಯದ ಹೆಸರು ತನ್ನಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಅತಿಥಿಗಳಾದ ಪ್ರೊ. ಸಿದ್ರಾಮ ಯರನಾಳ ಅವರು ಮಾತನಾಡಿ,ವಿದ್ಯಾರ್ಥಿಗಳು ಸದಾಕಾಲ ಓದಿನೊಂದಿಗೆ ಆಳವಾದ ಅಧ್ಯಯನದಲ್ಲಿ ತೊಡಗಿಸಿಕೊಂಡು ಸ್ಪರ್ಧಾತ್ಮಕ ಯುಗದಲ್ಲಿ ಛಲ, ಗುರಿಯೊಂದಿಗೆ ಉತ್ತಮ ಕನಸಿಯೊಂದಿಗೆ ಮುನ್ನಡೆಯಬೇಕು. ವಿದ್ಯಾರ್ಥಿಗಳು ಶ್ರಮಜೀವಿಯಾಗಿ, ಕಾಯಕಯೋಗಿಗಳಾಗಿ ಕೆಲಸದಲ್ಲಿ ತೊಡಗಿಸಿಕೊಂಡಾಗ ಯಶಸ್ವಿಯಾಗಲು ಸಾಧ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ.ಅಶೋಕ ಹೆಗಡೆ ಅವರು ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನಸಂಗ್ರಹ ಅಗತ್ಯ. ಜ್ಞಾನವಂತರು, ಪ್ರತಿಭಾವಂತರು ಈ ನಾಡಿನ ಭದ್ರಬುನಾದಿ. ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಮೂಲಕ ಎನ್‌ಎಸ್‌ಎಸ್, ಎನ್‌ಸಿಸಿ ಘಟಕದಲ್ಲಿ ಸೇರುವದು ಅಗತ್ಯವಾಗಿದೆ. ಅದರಿಂದ ಶಿಕ್ಷಣದ ಜೊತೆಗೆ ದೈಹಿಕವಾಗಿ ಆರೋಗ್ಯ ವಂತರಾಗಲು ಸಾಧ್ಯವಿದೆ ಎಂದರು.ಕಳೆದ ಸಾಲಿನಲ್ಲಿ ಸಾಧನೆಗೈದ ಕ್ರೀಡಾಪಟುಗಳಿಗೆ,ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಸನ್ಮಾನಿಸಿ ಗೌರವಿಸಿದ್ದು ವಿಶೇಷವಾಗಿತ್ತು.
ಇದೇ ಸಂದರ್ಭದಲ್ಲಿ ಶಾಸಕರ ಮಾದರಿ ಶಾಲೆಯ ಮುಖ್ಯ ಗುರುಗಳಾದ ಪಿ.ಸಿ.ತಳಕೇರಿ, ಡಾ.ಅಶೋಕಕುಮಾರ ಜಾದವ್,ಪ್ರೊ .ಪ್ರೇಮಕುಮಾರಿ, ಪ್ರೊ .ಎಸ್.ಬಿ.ಜಾಲವಾದಿ, ಜಗನ್ನಾಥ್ ಸಜ್ಜನ್, ಡಾ.ಬಿ.ಎಸ್. ಬಿರಾದಾರ, ಡಾ.ಗದಿಗೆಪ್ಪಗೌಡ, ಮಂಜುನಾಥ ಮಾನೆ, ವಿಶ್ವನಾಥ ಕಲ್ಮೇಶ್ವರ, ಯಾಸ್ಮಿನ್ ಸಿಕ್ಕಲಗಾರ, ಯಾಸ್ಮಿನ್ ನದಾಫ್, ಗೋಪಾಲ್ ಚಕ್ರಪಾಣಿ, ಪ್ರಶಾಂತ್ ಮಮದಾಪುರ, ವೈ. ಎ. ಇನಾಂದಾರ,ಪ ಪಂ ಮಾಜಿ ಅಧ್ಯಕ್ಷರ ಪ್ರತಿನಿಧಿಯಾದ ಮುನೀರ್ ಅಹ್ಮದ್ ಮಳಖೇಡ,ಪ ಪಂ ಸದಸ್ಯರುಗಳಾದ ಕಾಸುಗೌಡ ಬಿರಾದಾರ ಜಲಕತ್ತಿ, ಶಾಂತಯ್ಯ ಜಡಿಮಠ,ಸಿಂಧೂರ ಡಾಲೇರ, ಸುಮಂಗಲಾ ಸೇಬೆನ್ನವರ್ ಹಾಗೂ ವೀರೇಶ ಕುದುರಿ ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ,ಅತಿಥಿ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ. ಬಿ.ಎಸ್. ಶಿವಶರಣ ಹಾಗೂ ಜ್ಯೋತಿ ಹೂಗಾರ ನಿರೂಪಿಸಿ ವಂದಿಸಿದರು.
