ಉದಯವಾಹಿನಿ, ಔರಾದ್ : ಮಾಜಿ ಸಚಿವರು ಹಾಗೂ ಔರಾದ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಆಗಸ್ಟ್ 30ರಂದು ಬೋಂತಿ ತಾಂಡಾ ನಿವಾಸದಲ್ಲಿ ಸಹೋದರಿಯರು ಮತ್ತು ಮಹಿಳಾ ಕಾರ್ಯಕರ್ತರೊಂದಿಗೆ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದರು.ಸುತ್ತಲಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಕಾರ್ಯಕರ್ತರು ಶಾಸಕರ ಹಣೆಗೆ ತಿಲಕವಿಟ್ಟು,‌ ಆರತಿ ಬೆಳಗಿ ರಾಖಿ ಕಟ್ಟಿ ಸಂಭ್ರಮದಿಂದ ಶುಭ ಕೋರಿದರು.ಈ ವೇಳೆ ಮಾತನಾಡಿದ ಶಾಸಕರು, ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯರಿಗೆ ಇದು ಸಂಭ್ರಮದ ದಿನವಾಗಿರುತ್ತದೆ. ಸಮಾಜದ ದುಷ್ಟ ಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಕೈಗೆ ರಾಖಿಯನ್ನು ಕಟ್ಟುತ್ತಾಳೆ. ಸಹೋದರತೆ ಮತ್ತು ಭ್ರಾತತ್ವದ ಸಂಕೇತವಾಗಿರುವ ಅಪರೂಪದ ಹಬ್ಬ ರಕ್ಷಾ ಬಂಧನವಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!