ಉದಯವಾಹಿನಿ ಅಥಣಿ : ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಬೆನ್ನಲ್ಲೆ ಸರ್ಕಾರ ಹಲವು ಎಡವಟ್ಟುಗಳ ಮೂಲಕ ಹಲವಾರು ಆರೋಪ ಕೊರಳಿಗೆ ಹಾಕಿಕೊಂಡಿದೆ.ಗ್ಯಾರಂಟಿ ಯೋಜನೆಗಳಿಗೆ ಜೋತು ಬಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಾರ್ವಜನಿಕರಿಗೆ ಹಲವು ಸಮಸ್ಯೆಗಳನ್ನು ಎದುರಿಸುವಂತೆ ಮಾಡಿದೆ ಅದರಲ್ಲೂ ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಲು ನರಕ ಯಾತನೆ ಅನುಭವಿಸುವಂತಾಗಿದೆ ಅಂದರೆ ತಪ್ಪಾಗಲಾರದು.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ ಶ್ರವಣ ಮಾಸದ ನಿಮಿತ್ಯ ಧಾರ್ಮಿಕ ಸ್ಥಳಗಳಿಗೆ ಸಾಗುವ ಮಹಿಳೆಯರ ಸಂಚಾರದಿಂದ ಹೆರಳ ಏರಿಕೆ ಕಂಡಿದೆ ಇದರಿಂದ ಬಸ್‌ನಲ್ಲಿ ವಿದ್ಯಾರ್ಥಿಗಳಿಗೆ ಸ್ಥಳವಿಲ್ಲದೆ ಹಲವು ಕಡೆಗಳಲ್ಲಿ ವಿದ್ಯಾರ್ಥಿಗಳು ರೋಡಿಗಿಳಿದ ಘಟನೆಗಳು ಸರ್ವೇ ಸಾಮಾನ್ಯವಾಗಿದೆ.ಇದರಿಂದ ಬೇಸತ್ತ ವಿದ್ಯಾರ್ಥಿಗಳು ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಸಂಕಷ್ಟ ಬಂದಿದೆ ಇದರಿಂದ ಶಕ್ತಿ ಯೋಜನೆ ರದ್ದುಗೊಳಿಸಿ ಇಲ್ಲವಾದಲ್ಲಿ ಹೆಚ್ಚುವರಿ ಬಸ್ ನೀಡುವಂತೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕಾಲೇಜು ವಿದ್ಯಾರ್ಥಿಗಳು ಮಾಧ್ಯಮದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಹಳ್ಳಿಯಿಂದ ಪ್ರತಿನಿತ್ಯ ಬಸ್ ಮೂಲಕ ಸಂಚಾರ ಮಾಡಿ ಅಧ್ಯಯನ ಮಾಡುವ ನಮಗೆ ಶಕ್ತಿ ಯೋಜನೆಯಿಂದ ಜನಜಂಗುಳಿ ಹೆಚ್ಚಾಗಿ ತಿಂದರೆಯಾಗುತ್ತಿದೆ, ಕೂಡಲೇ ಶಕ್ತಿ ಯೋಜನೆ ಬಂದ್ ಮಾಡಿ ನಮಗೆ ಕಲಿಯಲು ಸಹಕರಿಸಿ – ಕುಮಾರ ನಾರೋಡೆ (ವಿದ್ಯಾರ್ಥಿ)

ಶಕ್ತಿ ಯೋಜನೆಯಿಂದ ನಮ್ಮ ಊರಿಗೆ ಎರಡು ಸಲ ಬರ್ತಿದ್ದ ಬಸ್ ಒಂದೇ ಸಲ ಬರ್ತಾಯಿದೆ, ಜೊತೆಗೆ ಕಾಲು ಇಡಲೂ‌ ಸಹ ಸಾಧ್ಯವಾಗದೇ ಎದ್ದು ನಿಂತು ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ – ಸಂಗೀತಾ ರೊಡ್ಡಿ (ವಿದ್ಯಾರ್ಥಿನಿ)

Leave a Reply

Your email address will not be published. Required fields are marked *

error: Content is protected !!