ಉದಯವಾಹಿನಿ ಸಿರುಗುಪ್ಪ : ತಾಲ್ಲೂಕಿನ ಸಿರಿಗೇರಿ ಸಮೀಪದ ಸಿದ್ದರಾಂಪುರ ಗ್ರಾಮದ ಹೊಲ ಒಂದರಲ್ಲಿ ಕೃಷಿ,ತೋಟಗಾರಿಗೆ,ಕಂದಾಯ ಇಲಾಖೆಗಳ ಅಧಿಕಾರಿಗಳು ಮಂಗಳವಾರ ಭೇಟಿ ಮಾಡಿ ಬರಗಾಲ ಬೆಳೆಗಳ ಸಮೀಕ್ಷೆಯನ್ನು ಪರಿಶೀಲಿಸಿದರು. ಉತ್ತರ ಕರ್ನಾಟಕದಲ್ಲಿ ಮಳೆ ಅಭಾವ ಇರುವುದರಿಂದ ಅಪಾರ ಬೆಳೆ ನಷ್ಟ ಹೊಂದಿದ್ದರಿAದ ಬರಗಾಲ ಪೀಡಿತ ಎಂದು ತಾಲೂಕಿನ ಸಿರಿಗೇರಿಯ ವ್ಯಾಪ್ತಿಯ ಸಿದ್ದರಾಂಪುರ ಗ್ರಾಮ ಗುರುತಿಸಿದ ಹಿನ್ನೆಲೆ ಜಿಲ್ಲಾ ಕೃಷಿ ನಿದೇರ್ಶಕರಾದ ಡಾ.ಮಲ್ಲಿಕಾರ್ಜುನ ಮತ್ತು ಕೃಷಿ ಉಪನಿರ್ದೇಶಕರಾದ ಕೆಂಪೆಗೌಡ ನೇತೃತ್ವದಲ್ಲಿ ಸಿದ್ದರಾಂಪುರಕ್ಕೆ ಸುಮಾರು 22೦ ಎಕರೆ ಪ್ರದೇಶದಲ್ಲಿ ನವಣೆ ಬೆಳೆ ಪರಿಸ್ಥಿತಿಯನ್ನು ಅವಲೋಕಿಸಿ ಮಾಹಿತಿ ಪಡೆದುಕೊಂಡರು.ನ0ತರ ಕೃಷಿ ಅಧಿಕಾರಿ ಪುರುಷೋತ್ತಮ ಮಾಹಿತಿ ನೀಡಿ ಸಿರುಗುಪ್ಪ ತಾಲೂಕು ಬರಗಾಲ ಪ್ರದೇಶವೆಂದು ಘೋಷಣೆಯಾದ ಹಿನ್ನಲೆಯಲ್ಲಿ ಸಿರಿಗೇರಿ ಗ್ರಾಮದ ಸುತ್ತಮುತ್ತ ರೈತ ಬೆಳೆಗಳನ್ನು ಸಮೀಕ್ಷೆ ಮಾಡಲಾಗುತ್ತದೆ.ಬೆಳೆಗಳಾದ ನವಣೆ,ಮೆಕ್ಕೆಜೋಳ,ಸಜ್ಜೆ,ಮೆಣಿಸಿಕಾಯಿ,ತೊಗರಿಬೆಳೆಗಳ ಪರಿಸ್ಥಿತಿಯನ್ನು ಅಧಿಕಾರಿಗಳು ಸಮೀಕ್ಷೆ ನಡೆಸಿ ಮಾರ್ಗದಶ್ನದಲ್ಲಿ ಮುಂಗಾರುಬೆಳೆ ಹಾನಿ ಆ್ಯಪ್‌ನಲ್ಲಿ ಜಿಪಿಎಸ್ ಮೂಲಕ ಸೇರಿಸಲಾಗುವುದು ಎಂದು ತಿಳಿಸಿದರು. ಬರ ಪರಿಹಾರ ಬೆಳೆ ಸಮೀಕ್ಷೆ ತಂಡದ ಅಧಿಕಾರಿಗಳಾದ ಜಿಲ್ಲಾ ಕೃಷಿ ನಿರ್ದೇಶಕರಾದ ಮಲ್ಲಿಕಾರ್ಜುನ,ಕೃಷಿ ಉಪನಿರ್ದೇಶಕರಾದ ಕೆಂಪೆಗೌಡ,ಕೃಷಿ ಅಧಿಕಾರಿ ಹೇಮ್ಲಾನಾಯಕ,ವಿ.ಎ.ನಾಗರಾಜ್,ರೈತ ಮುಖಂಡರಾದ ಶಿವಶಂಕರಗೌಡ ಇದ್ದರು.

Leave a Reply

Your email address will not be published. Required fields are marked *

error: Content is protected !!