ಉದಯವಾಹಿನಿ ಸಿರುಗುಪ್ಪ: ತಾಲ್ಲೂಕಿನ ಸಿರಿಗೇರಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕಾಯಕಯೋಗಿ ನುಲಿಯ ಚಂದಯ್ಯ ಮತ್ತು ಬಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಸಮುದಾಯದ ಮುಖಂಡರುಗಳು ಪುಷ್ಪ ನಮನ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.ಗ್ರಾಮದ ಪ್ರಮುಖ ಬೀದಿಗಳಲ್ಲಿ ಶರಣ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಇರಿಸಿ ಡೊಳ್ಳು,ನೃತ್ಯ ಮಾಡುವುದರ ಮೂಲಕ ಮೆರವಣೆಗೆ ಮಾಡಲಾಯಿತು.ಸಮುದಾಯದ ಯುವ ಮುಖಂಡ ಭಜಂತ್ರಿ ರಮೇಶ್ ಮಾತನಾಡಿ ನಮ್ಮ ಸಮುದಾಯದ ಕಟ್ಟಕಡೆಯ ವ್ಯಕ್ತಿಯು ಶಿಕ್ಷಣ,ರಾಜಕೀಯ,ಆರ್ಥಿಕ,ಸಾಮಾಜಿಕವಾಗಿ ಹೊರಹೊಮ್ಮುವ ಚಾಕಚಾಕ್ಯತೆಯನ್ನು ಕಲಿಯಬೇಕು.ನಮ್ಮ ಪರಂಪರೆಯ ವೃತ್ತಿಯನ್ನು ಬಿಡದೇ ಗುರಿ ಉದ್ದೇಶಗಳನ್ನು ಪಡೆಯುವಂತಹ ಶಕ್ತಿ ಹೊಂದಬೇಕಾಗಿದೆ.ಕಷ್ಟಕಾರ್ಪಣ್ಯಗಳನ್ನು ಎದುರಿಸಿ ವಚನ ಸಾಹಿತ್ಯವನ್ನು ರಚಿಸಿದ ಮಾಹಾನ್ ಶರಣರುಗಳಾಗಿ ಸಮಾಜಕ್ಕೆ ಉತ್ತಮ ತತ್ವಾದರ್ಶಗಳನ್ನು ನೀಡಿದ್ದಾರೆ.
ನಂತರ ನಿವೃತ್ತ ವೈದ್ಯಾಧಿಕಾರಿ ಟಿ.ಮೃತ್ಯುಂಜಯ ಮಾತನಾಡಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವಿಸಿ ಶಿವಶರಣರಾದಿಯಾಗಿ ಸಮಾಜವನ್ನು ತಿದ್ದುವ ಕೆಲಸ ಮಾಡಿ ಹೋಗಿದ್ದಾರೆ.ಅಂತಹ ಸಮಾಜ ಸುಧಾರಕರನ್ನು ಬರಿ ಭಾಷಣಕ್ಕೆ ಸೀಮಿತರಾಗದೇ ಆವರ ಆದರ್ಶಗಳನ್ನು ಪಾಲಿಸಬೇಕಾದ ಅಗತ್ಯತೆಯೆಯು ಇದೆ ಎಂದು ಮಾರ್ಮಿಕವಾಗಿ ನುಡಿದರು.ಗ್ರಾಮದಲ್ಲಿ ಸುಮಾರು ೪೦ ವರ್ಷದಿಂದ ಬಯಲಾಟ ಕೇತ್ರದಲ್ಲಿ ಹಾರ್ಮೋನಿಯಂ ಹಿರಿಯ ಕಲಾವಿದ ಕೆ.ಎಂ.ಬಸವರಾಜಯ್ಯ ಗ್ರಾಮಾಡಳಿತದ ವತಿಯಿಂದ ವಿಶೇಷ ಸಭೆ ಮಾಡಿ ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸ್ಸು ಮಾಡಬೇಕಾಗಿ ಮನವಿ ಮಾಡಿಕೊಂಡರು.
ವಿ.ಹನುಮೇಶ್,ಲಕ್ಷö್ಮಣ್ ಭಂಡಾರಿ ಇಬ್ಬರ ಶರಣರ ಜೀವನ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಪಿಡಿಒ ಯು.ರಾಮಪ್ಪ,ಶಂಕ್ರಪ್ಪ,ಶಿವಪ್ಪ,ಅ0ಜಿನಿ,ವೀರೇಶ್,ಸೋಮಶೇಖರ್,ದೊಡ್ಡ ಅಂಜಿನಿ,ಷಣ್ಮುಖಪ್ಪ,ವೀರೇಶಪ್ಪ,ಟೈಲರ್ ನಾಗರಾಜ್,ಮಲ್ಲಿಕಾರ್ಜುನ,ಹುಲುಗಪ್ಪ,ಅನೀಲ್,ಹನುಮಂತರೆಡ್ಡಿ,ರಾಜ,ಸ0ಜೀವ,ರಾಜ,ಗೋವಿ0ದ ಶಿವಶಂಕ್ರಪ್ಪ,ಸು0ಕಯ್ಯ,ತಿಪ್ಪೇಸ್ವಾಮಿ,ಬಿ.ಉಮೇಶ್,ಸದ್ದಾ0,ಶ್ರೀರಾಮ್,ರಾಮ್‌ಬಾಬು,ಗ್ರಾ.ಪ0 ಸಿಬ್ಬಂದಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!