ಉದಯವಾಹಿನಿ, ಲಂಡನ್: ಇಂಗ್ಲೆಂಡ್ ರಾಜಕುಮಾರಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ದೊದಿ ಅವರ ತಂದೆ ಲಂಡನ್ನ ಪ್ರಖ್ಯಾತ ಹ್ಯಾರೊಡ್ಸ್ ಡಿಪಾರ್ಟ್ಮೆಂಟ್ ಸ್ಟೋರ್ನ ಮಾಜಿ ಮಾಲೀಕ ಮೊಹಮ್ಮದ್ ಆಲ್ ಫಯೆದ್ ಅಸುನೀಗಿದ್ದಾರೆ ಎಂದು ಅವರ ಕುಟುಂಬ ವರ್ಗ ತಿಳಿಸಿದೆ.94 ವರ್ಷದ ಫಯೆದ್ ಈಜಿಪ್ಟ್ನ ಉದ್ಯಮಿಯಾಗಿದ್ದು, ಫುಲ್ಹಮ್ ಫುಟ್ಬಾಲ್ ಕ್ಲಬ್ನ ಮಾಜಿ ಮಾಲೀಕರೂ ಆಗಿದ್ದರು.
26 ವರ್ಷದ ಹಿಂದೆ ನಡೆದ ರಾಯಕುಮಾರಿ ಡಯಾನಾ ಜೊತೆ ಮೊಹಮದ್ ಆಲ್ ಫಯೆದ್ ಅವರು ಮಗ ದೊದಿ ಫಯಾದ್ ಕೂಡ ಅಸುನೀಗಿದ್ದರು. ಮಗನ ಸಾವಿನಿಂದ ಅವರು ಜರ್ಜರಿತರಾಗಿದ್ದರು. ತಮ್ಮ ಉಳಿದ ಜೀವನವನ್ನು ಮಗಳ ಕಳೆದುಕೊಂಡ ದುಃಖದಲ್ಲಿ ಕಳೆದ ಅವರು, ಮಗನ ಸಾವಿಗೆ ಕಾರಣರಾದ ಬ್ರಿಟಿಷ್ ರಾಜಮನೆತನದ ವಿರುದ್ಧ ಹೋರಾಡಿದರು. ಮೊಹಮದ್ ಅಲ್ ಫಯೆದ್ ಅವರು 2023 ಆಗಸ್ಟ್ 30ರಂದು ತಮ್ಮ ಇಳಿ ವಯಸ್ಸಿನಲ್ಲಿ ನೆಮ್ಮದಿಯಾಗಿ ಸಾವನ್ನಪ್ಪಿದ್ದಾರೆ ಎಂದು ಅವರ ಮಕ್ಕಳು ಮತ್ತು ಮೊಕ್ಕಳು ಮತ್ತು ಪ್ರೀತಿಪಾತ್ರ ಹೆಂಡತಿ ದೃಢಪಡಿಸಿದ್ದಾರೆ ಎಂದು ಫುಲ್ಹಾಮ್ ಕ್ಲಬ್ ತಮ್ಮ ಹೇಳಿಕೆಯಲ್ಲಿ ಬಿಡುಗಡೆ ಮಾಡಿದೆ. ಅವರು ತಮ್ಮ ದೀರ್ಘ ಮತ್ತು ಖುಷಿಯಾದ ನಿವೃತ್ತಿ ಜೀವನವನ್ನು ತಮ್ಮ ಪ್ರೀತಿಪಾತ್ರರೊಂದಿಗೆ ಕಳೆದಿದ್ದಾರೆ.
