ಉದಯವಾಹಿನಿ, ನೂಹ್ (ಹರಿಯಾಣ): ಒಂದೇ ಕುಟುಂಬದ ಮೂವರು ಪುಟ್ಟ ಮಕ್ಕಳ ಹಾಗೂ ಓರ್ವ ವ್ಯಕ್ತಿ ಸೇರಿದಂತೆ ನಾಲ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಹರಿಯಾಣದ ನೂಹ್ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಈ ಘಟನೆಯ ಬಳಿಕ ಮೃತ ವ್ಯಕ್ತಿಯ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಒಟ್ಟಿಗೆ ನಾಲ್ವರು ಸಾವನ್ನಪ್ಪಿರುವುದರ ಹಿಂದೆ ಈಕೆಯ ಕೈವಾಡ ಇರುವ ಸಂಶಯ ವ್ಯಕ್ತವಾಗಿದೆ.
ಇಲ್ಲಿನ ಗಂಗೊಳ್ಳಿ ಗ್ರಾಮದ ಮನೆಯೊಂದರಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು 38 ವರ್ಷದ ಜಿತನ್ ಹಾಗೂ ಈತನ ಮಕ್ಕಳಾದ 12 ಹಾಗೂ 8 ವರ್ಷದ ಪುತ್ರರು ಮತ್ತು 10 ವರ್ಷದ ಪುತ್ರಿ ಎಂದು ಗುರುತಿಸಲಾಗಿದೆ. ನಾಲ್ವರ ಶವಗಳು ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇಂದು ಬೆಳಗ್ಗೆ ಗ್ರಾಮಸ್ಥರು ಗಮನಿಸಿದ ನಂತರ ಈ ದುರಂತ ಬಯಲಿಗೆ ಬಂದಿದೆ.
