ಉದಯವಾಹಿನಿ, ವ್ಯಕ್ತಿಯೊಬ್ಬನ ಜೀವನಕ್ಕೆ ಬೇಕಾದ ಎಲ್ಲ ಅಗತ್ಯಗಳನ್ನು ಪೂರೈಸುವುದರಿಂದ ಸಂಸ್ಕೃತದಲ್ಲಿ ಕಲ್ಪವೃಕ್ಷ ಎನ್ನಲಾಗುವುದು.
ಪ್ರತಿಯೊಂದು ವಸ್ತುಗಳ ಮಹತ್ವ ಮತ್ತು ಘಟನೆಯ ಪ್ರಾಮುಖ್ಯತೆಯನ್ನು ಸಾರುವ ಉದ್ದೇಶದಿಂದಾಗಿ ಅದಕ್ಕಾಗಿಯೇ ಒಂದು ದಿನವನ್ನು ಮೀಸಲಾಗಿರಿಸಿದ್ದು, ಅದರ ಆಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುವುದು.
ಅದರಂತೆ, ಸೆಪ್ಟೆಂಬರ್​ 2ರಂದು ವಿಶ್ವ ತೆಂಗಿನಕಾಯಿ ದಿನವಾಗಿ ಆಚರಣೆ ಮಾಡಲಾಗುವುದು. ಈ ಮೂಲಕ ತೆಂಗಿನಕಾಯಿಯ ಪ್ರಯೋಜನ ಮಾತ್ರವಲ್ಲದೇ ಅದರ ಮೌಲ್ಯ ಮತ್ತು ಅದರ ಕುರಿತು ಜ್ಞಾನವನ್ನು ತಿಳಿಸುವ ಪ್ರಯತ್ನ ನಡೆಸಲಾಗುವುದು.
ವಿಶ್ವದಾದ್ಯಂತ ಅತಿ ಹೆಚ್ಚು ಸೇವನೆ ಮಾಡುವ ಆಹಾರಗಳಲ್ಲಿ ತೆಂಗಿನ ಕಾಯಿ ಒಂದಾಗಿದೆ. ತೆಂಗಿನಕಾಯಿ ಬಹು ಉಪಯೋಗಿಯಾಗಿದೆ. ನಿಸರ್ಗದತ್ತವಾಗಿ ಬಹು ಉತ್ಪಾದನೆಯನ್ನು ಹೊಂದಿರುವ ಈ ತೆಂಗಿನಕಾಯಿ ದೇಹ ತಂಪು ಮಾಡಿಕೊಳ್ಳುವ ಜ್ಯೂಸ್​ಗೆ ಹಾಗೇ ಸೌಂದರ್ಯ ವರ್ಧಕ ಉತ್ಪಾದನೆ ಸೇರಿದಂತೆ ಗೃಹಾಲಂಕಾರಕ್ಕೂ ಅಗತ್ಯವಾಗಿದೆ. ಅಡಿಯಿಂದ ಮುಡಿಯವರೆಗೆ ತೆಂಗಿನ ಮರದ ಎಲ್ಲಾ ಉತ್ಪನ್ನಗಳನ್ನು ಒಂದಿಲ್ಲ ಒಂದು ರೀತಿಯಾಗಿ ಉಪಯೋಗಿಸಲಾಗುತ್ತದೆ. ಇದೇ ಕಾರಣಕ್ಕೆ ಇದು ಭಾರತೀಯ ಪಾಲಿಗೆ ದೈವಿಕ ಸ್ಥಾನ ಪಡೆದ ಮರವಾಗಿದ್ದು, ಸಂಸ್ಕೃತದಲ್ಲಿ ಕಲ್ಪವೃಕ್ಷ ಎಂದು ಕರೆಯಲಾಗುವುದು. ಅದರರ್ಧ ದೈವಿಕ ಮರ ಎಂಬುದಾಗಿದೆ. ಇದು ಜೀವಿಸಲು ಬೇಕಾದ ಎಲ್ಲಾ ರೀತಿಯ ವಸ್ತುಗಳನ್ನು ನೀಡುತ್ತದೆ.
ತೆಂಗಿನ ಮರವೂ ಡ್ರೂಪ್​ ಕುಟುಂಬಕ್ಕೆ ಸೇರಿದ್ದು, ಇದು ಉಷ್ಣವಲಯದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅದರಲ್ಲೂ ಏಷ್ಯನ್​​ ಫೆಸಿಫಿಕ್​ ಪ್ರದೇಶದಲ್ಲಿ ಹೆಚ್ಚಾಗಿ ಕಾಣಬಹುದು.
ತೆಂಗಿನ ಕಾಯಿ ದಿನದ ಇತಿಹಾಸ: ತೆಂಗಿನ ಮರವನ್ನು ಬಹುಪಯೋಗಿ ಮರ ಎಂದು ಕರೆಯಲಾಗುವುದು. ಕಾರಣ ಇದು ಅಡುಗೆ, ಇಂಧನ, ಔಷಧ, ಸೌಂದರ್ಯ ವರ್ಧಕ, ಕಟ್ಟಡ ಸಾಮಗ್ರಿ ಸೇರಿದಂತೆ ಇನ್ನಿತರ ಉಪಯೋಗಕ್ಕೆ ಬಳಕೆ ಮಾಡಲಾಗುವುದು. ಇಂತಹ ಉಪಯುಕ್ತವುಳ್ಳ ಮರದ ಬಗ್ಗೆ ಮೊದಲ ಬಾರಿಗೆ ಏಷ್ಯಾ ಫೆಸಿಫಿಕ್​ ಕೊಕೊನಟ್​ ಕಮ್ಯೂನಿಟಿ (ಎಪಿಸಿಸಿ) ವಿಶ್ವದ ಗಮನ ಸೆಳೆಯಿತು.

 

Leave a Reply

Your email address will not be published. Required fields are marked *

error: Content is protected !!