ಉದಯವಾಹಿನಿ, ದೇವದುರ್ಗ:- ಶಿಕ್ಷಣ ಇಲಾಖೆಯಿಂದ ನೇಮಿಸಲ್ಪಟ್ಟ ನೋಡಲ್ ಅಧಿಕಾರಿ ಶ್ರೀನಿವಾಸ (ದೇವದುರ್ಗ ಪಶ್ಚಿಮ ಕ್ಲಸ್ಟರ್) ಅವರ ನೇತೃತ್ವದಲ್ಲಿ ಶನಿವಾರ ದಂದು ನಡೆದ ಸೋಮಕಾರದೊಡ್ಡಿ ಸ.ಕಿ.ಪ್ರಾ.ಶಾಲೆಯ ಎಸ್ ಡಿ ಎಂ ಸಿ ಯ ನೂತನ ಅಧ್ಯಕ್ಷರಾಗಿ ನಾಗರಾಜ ನಾಯಕ ಸೋಮಕಾರ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಹಂಪಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ನೋಡಲ್ ಅಧಿಕಾರಿ ಶ್ರೀನಿವಾಸ ತಿಳಿಸಿದ್ದಾರೆ, ಆಯ್ಕೆ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ವೆಂಕಟೇಶ ನಾಯಕ ಸೋಮಕಾರ, ಶಾಲೆಯ ಶಿಕ್ಷಕರು ಸೇರಿದಂತೆ ಪಾಲಕರು ಉಪಸ್ಥಿತರಿದ್ದರು,

Leave a Reply

Your email address will not be published. Required fields are marked *

error: Content is protected !!