
ಉದಯವಾಹಿನಿ,ಸಿಂಧನೂರು: ತಾಲ್ಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಬಸವ ಚೇತನ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಗಿಡಗಳಿಗೆ ರಾಕಿ ಕಟ್ಟುವ ಮೂಲಕ ವೃಕ್ಷಾ ಬಂಧನ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ನೆರವೇರಿತು.ಕಾಲೇಜು ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಇರುವ ಎಲ್ಲಾ ಗಿಡಗಳ ಸುತ್ತಲೂ ಸ್ವಚ್ಚಗೊಳಿಸಿ,ರಂಗೋಲಿ ಹಾಕಿ,ಪರಿಸರ ಭಿತ್ತಿ ಚಿತ್ರಗಳನ್ನು ಅಂಟಿಸಿರುವುದು,ಗಿಡಗಳಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ,ಆರತಿ ಬೆಳಗಿ ಗಿಡಗಳಿಗೆ ರಾಕಿ ಕಟ್ಟಿರುವುದು ತುಂಬಾ ವಿಶೇವಾಗಿತ್ತು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೆಲ್ಲರೂ ಹಬ್ಬದ ಸಂಭ್ರಮ ಸಡಗರದಲ್ಲಿ ತಲ್ಲೀನರಾಗಿದ್ದರು.
ಕಾರ್ಯಕ್ರಮವನ್ನು ಕಾಲೇಜು ಪ್ರಾಂಶುಪಾಲರಾದ ವಿರುಪಾಕ್ಷಪ್ಪ ಗಚ್ಚಿಮನಿ ಹಾಗೂ ಅವರ ದಂಪತಿಗಳು ಗಿಡಗಳಿಗೆ ಆರತಿ ಬೆಳಗಿ ರಾಕಿ ಕಟ್ಟುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದಲ್ಲಿ ಜನಿಸಿದ ಪರಿಸರವಾದಿ ಸಾಲುಮರದ ತಿಮ್ಮಕ್ಕನವರು 249 ಗಿಡಗಳನ್ನು ನೆಟ್ಟು ಪೋಷಣೆ ಮಾಡಿ ಇಂದು ಪದ್ಮ ಶ್ರೀ ಪ್ರಶಸ್ತಿ ಪಡೆದು ಇಡೀ ಪ್ರಪಂಚಕ್ಕೆ ಹೆಸರುವಾಸಿಯಾಗಿದ್ದಾಳೆ.
ಅವರ ಹಾದಿಯಲ್ಲೇ ಅವರ ಮಾರ್ಗದರ್ಶನದೊಂದಿಗೆ ನಮ್ಮ ಭಾಗದ ಪರಿಸರ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಅಮರೇಗೌಡ ಮಲ್ಲಾಪುರ ಅವರನ್ನು ಪ್ರತಿದಿನ ದಿನ ಪರಿಸರದ ಅಧ್ಯಯನ ಪಾಠ ನಡೆಸಿದಾಗ ಇವರು ಹೆಸರು ಉಲ್ಲೇಖಿಸಲಾಗಿದೆ ಎಂದರು.ಶಿಕ್ಷಕರಿಗೆ ಕೃತಜ್ಞತೆಗಳು. ಮಕ್ಕಳೆಲ್ಲರೂ ಪರಿಸರ ಕಾಳಜಿಯನ್ನು ಮೌಗೂಡಿಸಿಕೊಳ್ಳಬೇಕು ಪರಿಸರವನ್ನು ಉಳಿಸಿಬೆಳಸಲು ಮುಂದಾಗಬೇಕೆಂದು ಕರೆ ನೀಡಿದರು.ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ದಿನನಿತ್ಯ ಪರಿಸರ ಸೇವೆಯಲ್ಲಿ ತೊಡಗಿರುವ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಪರಿಸರ ರಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ : ಅಮರೇಗೌಡ ಮಲ್ಲಾಪುರ ಕರ್ನಾಟಕ ಸರ್ಕಾರ ರಾಜ್ಯ ಪ್ರಶಸ್ತಿ ಪುರಸ್ಕೃತರು,ವರದಿಗಾರರಾದ ಕನಕರಾಯ ಆನೆಗುಂದಿ, ನವಾಬ್ ಷರೀಫ್ ವನಸಿರಿ ಚಂದ್ರದ್ರಶೆಖರ ಪವಾಡ ಶೆಟ್ಟಿ, ವನಸಿರಿ ಸದಸ್ಯರಾದ ಬೀರಪ್ಪ ದುಮ್ತಿ,ಶಾಲೆಯ ನಾಗರಾಜ ಮಸ್ಕಿ ಮುಖ್ಯಗುರುಗಳು ಸಾವಿತ್ರಿ ಗಚ್ಚಿನಮನಿ, ಉಪನ್ಯಾಸಸಕರು ಶಿಕ್ಷಕರಾದ ಅಶ್ವಿನಿ ಬಿದ್ರಿ, ಶ್ರೀದೇವಿ ಹಿರೇಮಠ,ನಾಗರಾಜ ನರಸಾಪೂರ,ಶರಣಬಸವ ತಳವಾರ,ಬಸವಾರಾಜ b,ನಾಗರಾಜ ಡಿ,ನವೀನ ಬಿ, ಜ್ಯೋತಿ ಎಸ್,ಲಕ್ಷ್ಮೀಬಾಯಿ, ಚನ್ನಮ್ಮ ,ನಾಗಮ್ಮ ,ಅಮರಮ್ಮ ಕಟ್ಟಿಮನಿ, ಈರಮ್ಮ, ಮಾಳ್ವಿಕ, ಜ್ಯೋತಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
