
ಉದಯವಾಹಿನಿ,ಅಥಣಿ : ಕೋವಿಡ್ ಸಂದರ್ಭದಲ್ಲಿ ಅತೀ ಹೆಚ್ಚು ಸಮಸ್ಯೆ ಅನುಭವಿಸಿದ್ದು ಖಾಸಗಿ ಶಾಲಾ ಶಿಕ್ಷಕರೇ, ಈ ರಾಜ್ಯದಲ್ಲಿ ಅತೀ ಹೆಚ್ಚಿನ ಅಂಕಗಳನ್ನು ಪಡೆಯುವ ಮಕ್ಕಳಿಗೆ ಪಾಠ ಮಾಡ್ತಾ ಇರೋದೆ ಖಾಸಗಿ ಶಿಕ್ಷಣ ಸಂಸ್ಥೆಗಳು, ಎಲ್ಲ ಶಿಕ್ಷಕರು ತಮ್ಮ ವೃತ್ತಿಯ ಧರ್ಮವನ್ನು ಕಾಪಾಡಿಕೊಂಡು ಕೆಲಸ ಮಾಡಿ ಎಂದು ಖಾಸಗಿ ಅನುದಾನ ರಹಿತ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್ ಅವರು ಹೇಳಿದರು.ಅವರು ಸ್ಥಳೀಯ ವಿದ್ಯಾವರ್ಧಕ ಶಾಲೆಯಲ್ಲಿ ಅಥಣಿ ತಾಲೂಕಾ ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರಿಗೆ ವಿಚಾರ ಸಂಕೀರ್ಣ ಹಾಗೂ ಗುರುಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು.ಸರಕಾರಿ ಶಾಲೆಗೆ ಯಾವುದೇ ನಿಯಮಗಳು ಇಲ್ಲ ಅಂದ್ರೂ ನಡೆಯುತ್ತವೆ ಆದರೆ ಖಾಸಗಿ ಶಾಲೆಗಳಿಗೆ ಮಾತ್ರ ಎಲ್ಲ ರೀತಿಯ ವ್ಯವಸ್ಥೆಯನ್ನು ಕೇಳಿ ಅಧಿಕಾರಿಗಳು ಮಲತಾಯಿ ಧೋರಣೆಯನ್ನು ಮಾಡ್ತಿದ್ದಾರೆ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು KAMS ವಿರೋಧಿಸ್ತಾಯಿಲ್ಲ, ರಾಷ್ಟ್ರೀಯ ಶಿಕ್ಷಣ ನೀತಿಯ ನಿಯಮಗಳ ಪ್ರಕಾರ ಕರ್ನಾಟಕದಲ್ಲಿ ಕೆಲಸ ನಿರ್ವಹಿಸಲು ಶಿಕ್ಷಕರ ಅವಶ್ಯಕತೆ ಇದೆ, ಖಾಸಗಿ ಶಿಕ್ಷಣ ಸಂಸ್ಥೆಯ ಯಾವ ಮಾಹಿತಿಯನ್ನು ನಾವು ಮಾಹಿತಿ ಹಕ್ಕಿನಡಿ ಯಾವ ಮೂರನೇಯ ವ್ಯಕ್ತಿಗೆ ಕೊಡುವುದಿಲ್ಲ ನಮ್ಮ ಹಕ್ಕಾಗಿದೆ. 2017-18 ರ ನಂತರ ಹೊಸ ಹೊಸ ಶಾಲೆಗಳನ್ನು ಪ್ರಾರಂಭಿಸಲು ಹಲವಾರು ಕಠಿಣ ನಿಯಮಗಳನ್ನು ಹೇರಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.ಅನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಬಿ ಮೊರಟಗಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮ ಕರ್ತವ್ಯ, ಇತ್ತೀಚಿಗೆ ಖಾಸಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದು ಖುಷಿಯ ವಿಚಾರ, ಕಾನೂನು ಚೌಕಟ್ಟಿನ ಒಳಗೆ ಶಿಕ್ಷಣ ಇಲಾಖೆಯ ನಿಯಮಗಳಿಗೆ ಬದ್ದರಾಗಿ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು ಎಂದರು.ಅನಂತರ ಮುಖಂಡ ಶಿವಾನಂದ ಗುಡ್ಡಾಪೂರ ಅವರು ಮಾತನಾಡಿ ರಾಜ್ಯದಲ್ಲೇ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಖಾಸಗಿ ಶಾಲೆಗಳ ಶಿಕ್ಷಕರೇ ದೇಶದ ಆಸ್ತಿ, ಅವರುಗಳಿಗೆ ನಾವೆಲ್ಲ ಸಹಕಾರ ಕೊಟ್ಟು ದೇಶಕ್ಕೆ ಭದ್ರ ಬುನಾದಿ ಒದಗಿಸೋಣ ಎಂದರು.ಈ ವೇಳೆ ಸುನೀಲ ಶಿವಣಗಿ, ಎಲ್ ಎನ್ ಬಣಜವಾಡ, ರಮೇಶ ಬುಲಬುಲೆ, ಎಸ್ ಎಮ್ ಲಕ್ಷ್ಮೇಶ್ವರ, ಡಿ ಡಿ ಮೇಕನಮರಡಿ, ಕೆ ವಿ ಯಾದವಾಡ, ಎಸ್ ಎ ಚಿಕ್ಕಟ್ಟಿ, ರಾವಸಾಬ ಐಹೊಳೆ, ಚಿದಾನಂದ ಪಾಟೀಲ, ಕೆ ಬಿ ಜಾಲವಾದಿ, ಎ ಎಸ್ ಜೋಶಿ, ಅರುಣ ಮಾಳಿ, ಡಾ ಸುರೇಶ ಇಂಚಗೇರಿ, ಆನಂದ ಕುಲಕರ್ಣಿ, ಸದಾಶಿವ ಚಿಕ್ಕಟ್ಟಿ, ಆರ್ ಎಮ್ ಪಾಟೀಲ, ಮುತ್ತಪ್ಪಾ ಬಡಿಗೇರ, ರಾಜಕುಮಾರ ದಳವಾಯಿ
ಎನ್ ಎ ಪಾಟೀಲ, ಜಗದೀಶ ಅವಟಿ ಸೇರಿದಂತೆ ಇತರರಿದ್ದರು.
