ಉದಯವಾಹಿನಿ,ಬಸವನಬಾಗೇವಾಡಿ: ಅಖಂಡ ತಾಲೂಕಿನ ಹೆಬ್ಬಾಳದ ಆಯುಷ್ಯ ಆರೋಗ್ಯ ಕ್ಷೇಮ ಕೇಂದ್ರ ವತಿಯಿಂದ ಗ್ರಾಮದ ಹೈಸ್ಕೂಲ್ ಆವರಣದಲ್ಲಿ ಉಚಿತ ಯೋಗ ಶಿಬಿರ ಆಯೋಜಿಸಲಾಗಿದೆ.ಶಿಬಿರದಲ್ಲಿ ಪಟ್ಟಣದ ಯೋಗ ಶಿಕ್ಷಕ ಕಾಶಿನಾಥ ಎಸ್ ಅವಟಿ ಅವರು ನಿತ್ಯ ಸಾರ್ವಜನಿಕರಿಗೆ ವಿವಿಧ ಆಸನಗಳನ್ನು ಪರಿಚಯ ಮಾಡಿಕೊಡುತ್ತಿದ್ದಾರೆ. ಈ ಸಂದರ್ಭದಲ್ಲಿ ವೈಧ್ಯಾಧಿಕಾರಿ ಡಾ. ಜಗದೀಶ ನಿಡಗುಂದಿ, ಶ್ರೀಶೈಲ ಗುಬ್ಬೇವಾಢ, ಬಸವರಾಜ ವಂದಾಲ, ಕುಪೇಂದ್ರ ದೇಸಾಯಿ, ಆಯ್.ಎಸ್ ಪಾಟೀಲ, ಮುತ್ತು ಸವಣೂರ ಸೇರಿದಂತೆ ಹೆಬ್ಬಾಳ ಹಾಗೂ ಹಾಲಿಹಾಳ ಗ್ರಾಮದ ಅನೇಕರು ಹಾಜರಿದ್ದು ಶಿಬಿರದ ಪ್ರಯೊಜನ ಪಡೆದುಕೊಳ್ಳುತ್ತಿದ್ದಾರೆ.
