
ಉದಯವಾಹಿನಿ, ಮುದಗಲ್: ಪಟ್ಟಣ ಸಮೀಪದ ಆಶಿಹಾಳ ತಾಂಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಮದಿಹಾಳ ವಲಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಶುಕ್ರವಾರ ಜರುಗಿತು.ಜಿಲ್ಲಾ ಪಂಚಾಯಿತಿ, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಗಳು, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮತ್ತು ಸಮೂಹ ಸಂಪನ್ಮೂಲ ಕೇಂದ್ರ ಆಮದಿಹಾಳ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಶಿಹಾಳತಾಂಡ ಇವರ ಆಶ್ರಯದಲ್ಲಿ ನಡೆಸಿದ ಕಾರ್ಯಕ್ರಮವನ್ನು ಖೈರವಾಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ದೇವಪ್ಪ ಅವರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.ಆಶಿಹಾಳತಾಂಡ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಪ್ರೇಮ ಸಿಂಗ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಆಮದಿಹಾಳ ಶಿಕ್ಷಣ ಸಂಯೋಜಕರಾದ ಮಂಜುನಾಥ ರಜಪೂತ,ಸದಸ್ಯರಾದ ತಿಪ್ಪಣ್ಣ ರಾಠೋಡ, ಗೋಪಾಲ, ಶಾರದಾ ರಾಮಣ್ಣ,ನಾಗನಗೌಡ, ಅಮರೇಶ ನಾಡಗೌಡ, ಶಿಕ್ಷಕರಾದ ಮಲ್ಲಪ್ಪ, ಗಿರಿಮಲ್ಲಯ್ಯ, ಅಮರೇಶ ನಾಯ್ಕ್ ಸುಧಾ ಶಂಕ್ರಪ್ಪ, ಶರಣಬಸವ, ಶೈಲಜಾ, ಸೇರಿದಂತೆ ಆಶಿಹಾಳತಾಂಡ ಶಾಲೆಯ ಮುಖ್ಯಗುರುಗಳು, ಸಿಬ್ಬಂದಿಗಳು ಮತ್ತು ಮುದ್ದು ಮಕ್ಕಳು ಉಪಸ್ಥಿತರಿದ್ದರು
