
ಉದಯವಾಹಿನಿ,ಅಫಜಲಪುರ: ಆರೋಗ್ಯಕರ ಸಮಾಜ ಕಟ್ಟುವಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅವರ ತತ್ವಾದರ್ಶಗಳು ಪ್ರತಿಯೊಬ್ಬರು ಪಾಲನೆ ಮಾಡಬೇಕು ಎಂದು ಜ್ಞಾನ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾಂತೇಶ.ಡಿ ಪಾಟೀಲ ಹೇಳಿದರು.ಅವರು ತಾಲೂಕಿನ ಮಲ್ಲಾಬಾದ ಗ್ರಾಮದ ಜ್ಞಾನ ಭಾರತಿ ಶಿಕ್ಷಣ ಸಂಸ್ಥೆಯ ಆರಣದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ನೂಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಮಾಜದ ಹಿತಕ್ಕಾಗಿ ಶ್ರಮಿಸಿದ ಹನ್ನೆಡನೇ ಶತಮಾನದ ಶರಣರ ನೂಲಿಯ ಚಂದಯ್ಯ ಹಾಗೂ ಇಪ್ಪತ್ತನೆಯ ಶತಮಾನದ ಬ್ರಹ್ಮಶ್ರೀ ನಾರಾಯಣ ಗುರು ಅವರು ಸಮಾಜದ ಏಲಿಗೆಗಾಗಿ ಶ್ರಮಿಸಿದ್ದಾರೆ. ಅವರ ವುಚಾರಗಳಿಂದ ಇಂದು ನಮ್ಮ ನಾಡಿನ ಹಿರಿಮೆಯನ್ನು ಹೆಚ್ಚಿಸಿದೆ. ನಾಡಿನ ಶ್ರೇಷ್ಠ ಮೇಧಾವಿಗಳ ಬದುಕು ನಮ್ಮೇಲರಿಗೂ ಮಾದರಿಯಾಗಬೇಕು ಆ ನಿಟ್ಟಿನಲ್ಲಿ ಶಾಲಾ ಕಾಲೇಜಿನಲ್ಲಿ ಶ್ರೇಷ್ಠ ಚಿಂತಕರ ಆದರ್ಶಗಳು ಪರಿಚಯ ಮಾಡಿಕೊಡಬೇಕು ಎಂದ ಅವರು ಯುವ ಜನಾಂಗವು ನಾಡಿನ ಚಿಂತಕರ ಆಚಾರ ವಿಚಾರಗಳು ಮನನ ಮಾಡಿಕ್ಕೊಳ್ಳುವ ಮೂಲಕ ಸುಂದರ ಬದುಕು ರೂಪಿಸಿಕ್ಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಯಲ್ಲಾಲಿಂಗ ಪೂಜಾರಿ, ನಿಂಗಣ್ಣ ಪೂಜಾರಿ, ಅಬ್ಬಾಸಲಿ ನದಾಫ್, ಮಲ್ಲಯ್ಯ ಸ್ವಾಮಿ, ಶಶಿಕಾಂತ ಪತ್ತಾರ, ಶರಣು ಆಲಮೇಲ, ಹುಸೇನ್ ಪಟೇಲ್, ಅಂಕಿತಾ ಆಸಿಂಗಾಳ, ಪವನ್‌ಕುಮಾರ ಪಾಟೀಲ, ಭೌರಮ್ಮ ಗಂಗಾವತಿ, ವಿಜಯಲಕ್ಷ್ಮಿಷಿ, ಆಜರಾ, ಬಾಬುಗೌಡ ಪಾಟೀಲ ಸೇರದಂತೆ ವಿದ್ಯಾರ್ಥಿಗಳಿದ್ದರು.
