ಉದಯವಾಹಿನಿ, ಗುರುಮಠಕಲ್: ವಿಧ್ಯಾರ್ಥಿಗಳ ವಿದ್ಯಾಭ್ಯಾಸದ ಜೊತೆಗೆ ಅವರಲ್ಲಿ ಇರುವ ಗುಪ್ತ ಪ್ರತಿಭೆಗಳನ್ನು ಹೊರಗೆ ಹಾಕಲಿಕ್ಕೆ ಇದು ಸೂಕ್ತ ವಾದ ವೇದಿಕೆ. ಇಂತಹ ಪ್ರತಿಭೆಗಳು ಗುಡಿಸಿಲಿನಲ್ಲಿ ಹುಟ್ಟಿ ಅರಮನೆಯಲ್ಲಿ ಹರಳುತ್ತವೆ. ಮಕ್ಕಳ ನಿಜವಾದ ಪ್ರತಿಭೆಗಳನ್ನು ಪ್ರಾಥಮಿಕ ಶಾಲೆಗಳಲ್ಲಿ ಗುರುತಿಸುವುದೇ ಪ್ರತಿಭಕಾರಂಜಿ ಎಂದು ಪರಮಪೂಜ್ಯ ಶ್ರೀಮನ್ ನಿರಂಜನ ಪ್ರಣವ ಸ್ವರುಪಿ ಶಾಂತವೀರ ಗುರು ಮುರುಘರಾಜೇಂದ್ರ ಮಹಾ ಸ್ವಾಮಿಗಳು ಸಂಸ್ಥಾನ ಖಾಸಮಠ ಗುರುಮಠಕಲ್ ಪೂಜ್ಯರು ತಿಳಿಸಿದರು. ದಿನಾಂಕ 01-09-2023 ರಂದು ಪ್ರಗತಿ ಪ್ರೌಢ ಶಾಲೆ ಆವರಣದಲ್ಲಿ ಜರುಗಿದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಪರಮ ಪೂಜ್ಯರು ಸಮಗ್ರ ಶಿಕ್ಷಣ ಇಲಾಖೆ ಶಾಲಾ ಶಿಕ್ಷಣ ಇಲಾಖೆ ಸಮೂಹ ಸಂಪನ್ಮೂಲ ಕೇಂದ್ರ ಗುರುಮಠಕಲ್ 2023-24 ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮ ಒಂದನೇಯ ತರಗತಿಯಿಂದ ಹತ್ತನೇ ತರಗತಿ ಮಕ್ಕಳಲ್ಲಿ ಗುಪ್ತ ವಾಗಿ ಅಡಗಿರುವ ಕಲೆಯನ್ನು ಹೊರಗೆ ಹಾಕಲಿಕ್ಕೆ ಇದು ಸೂಕ್ತ ವಾದ ವೇದಿಕೆ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಪ್ರಗತಿ ಪ್ರೌಢ ಶಾಲೆಯ ಮುಖ್ಯ ಗುರುಗಳು ಗುರುಮಠಕಲ ಚನ್ನಾರೆಡ್ಡಿ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ
ಕರ್ನಾಟಕರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಅಧ್ಯಕ್ಷ ಶ್ರೀ ಸಂತೋಷ್ ಕುಮಾರ್ ನಿರೇಟಿ.ವಿಷಯ ಪರಿವೀಕ್ಷಕರು ಡಿ ಡಿ ಪೈ ಯಾದಗಿರಿ ಶ್ರೀ ಹಣಮಂತ ಹಂದರಿಕಿ.ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕ ಅಧ್ಯಕ್ಷ ಶ್ರೀ ನಾರಾಯಣ ರೆಡ್ಡಿ ಪೆÇೀಲಿಸ್ ಪಾಟಿಲ್. ಜಿಲ್ಲಾ ದೈಹಿಕ ಶಿಕ್ಷಕರ ಸಂಘ ಘಟಕ ಅಧ್ಯಕ್ಷರು ಲಕ್ಷ್ಮೀಕಾಂತ ರೆಡ್ಡಿ ಚಂಡರಿಕಿ. ಪ್ರೌಢಶಾಲೆ ಶಿಕ್ಷಕರ ಸಂಘ ವಿಭಾಗೀಯ ಉಪಾಧ್ಯಕ್ಷ ಅನಿಲಕುಮಾರ. ಚಂದ್ರಕಾಂತ ರೆಡ್ಡಿ . ಮಹಿಪಾಲರೆಡ್ಡಿ. ಮಲ್ಲಿಕಾರ್ಜುನ ಬಿಳ್ಹಾರ. ಮುಖ್ಯ ಗುರುಗಳು ಹಣಮಂತ ಗೊಂಗ್ಲೆ. ಲಿಂಗಾನಂದ ಗೋಗಿ ಸಹಶಿಕ್ಷಕರು.ಶಿವಶರಣಪ್ಪ.ಪ್ರಗತಿಪ್ರೌಡಶಾಲೆ ಕಾರ್ಯದರ್ಶಿ ಅಖ್ತರ್. ಬಿ ಆರ್ ಪಿ ಚಂದು ಜಾದವ್. ಬಿ ಆರ್ ಪಿ ಶಶಿಕಾಂತ. ವಲಯ ಸಂಪನ್ಮೂಲ ವ್ಯಕ್ತಿ ಬಾಲಪ್ಪ. ಶಿವರಾಜ ಸಾಕಾ .ಹಾಗೂ ಮಕ್ಕಳ ಪಾಲಕ ಪೆÇೀಷಕರು ಇದ್ದು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು .
