ಉದಯವಾಹಿನಿ, ವಯಸ್ಸಾದವರಿಗೆ ಮಲಬದ್ಧತೆ ಕೊಡುವ ಕಷ್ಟ ಒಂದೆರಡಲ್ಲ. ಸಾಕಷ್ಟು ಆಸ್ಪತ್ರೆಗಳಿಗೆ ತಿರುಗಾಡಿದ್ರೂ ಸಹ ಈ ಸಮಸ್ಯೆ ಮಾತ್ರ ಅಷ್ಟು ಸುಲಭದಲ್ಲಿ ನಿಮ್ಮ ಬೆನ್ನು ಬಿಡಲ್ಲ. ಆದರೆ ನೀವು ತುಪ್ಪವನ್ನ ಸರಿಯಾಗಿ ಬಳಕೆ ಮಾಡಿದ್ರೆ ಮಲಬದ್ಧತೆ ಕಷ್ಟದಿಂದ ಪಾರಾಗಬಹುದಾಗಿದೆ.
200 ಮಿಲಿಲೀಟರ್​​ ಬಿಸಿ ನೀರಿನ ಜೊತೆ ಒಂದು ಚಮಚ ತುಪ್ಪವನ್ನ ಮಿಕ್ಸ್ ಮಾಡಿಕೊಳ್ಳಿ.
ಇದನ್ನ ನಿತ್ಯ ಸೇವನೆ ಮಾಡೋದ್ರಿಂದ ಮಲಬದ್ಧತೆ ನಿವಾರಣೆಯಾಗುತ್ತೆ. ನಿಮಗೆ ಈ ಔಷಧಿ ಪರಿಣಾಮಕಾರಿಯಾಗಿ ತಾಗಬೇಕು ಅಂದ್ರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನ ಸೇವಿಸೋದನ್ನ ರೂಢಿ ಮಾಡಿಕೊಳ್ಳಿ.ತುಪ್ಪವನ್ನ ಸೂಪರ್​ ಫುಡ್​ ಎಂದು ಕರೆಯಲಾಗುತ್ತೆ. ತುಪ್ಪ ಸೇವನೆಯಿಂದ ಲಾಭ ಪಡೀಬೇಕು ಅಂದರೆ ಅದನ್ನ ಯಾವ ಹೊತ್ತಿನಲ್ಲಿ ಹೇಗೆ ಸೇವನೆ ಮಾಡಬೇಕು ಎಂಬುದರ ಬಗ್ಗೆ ನೀವು ಮೊದಲು ತಿಳಿದುಕೊಳ್ಳಬೇಕು. ತುಪ್ಪದಲ್ಲಿರುವ ಬ್ಯೂಟ್ರಿಕ್​ ಆಸಿಡ್​ ನಿಮ್ಮ ಮಲಬದ್ಧತೆಯ ಸಮಸ್ಯೆಯನ್ನ ದೂರ ಮಾಡೋಕೆ ಸಹಕಾರಿ. ಮಲಬದ್ಧತೆ ಜೊತೆ ಜೊತೆಯಲ್ಲಿ ಹೊಟ್ಟೆನೋವು, ಎಸಿಡಿಟಿಯನ್ನೂ ದೂರ ಮಾಡುವ ಸಾಮರ್ಥ್ಯ ತುಪ್ಪಕ್ಕಿದೆ.ಮಲಬದ್ಧತೆ ಸಮಸ್ಯೆ ಪರಿಹಾರ ಆಗೋದ್ರ ಜೊತೆಗೇ ನಿತ್ಯ ತುಪ್ಪ ಸೇವನೆಯಿಂದ ನಿಮ್ಮ ಮೂಳೆಯೂ ಶಕ್ತಿ ಶಾಲಿಯಾಗುತ್ತೆ. ಹಾಗೂ ತೂಕ ಇಳಿಸಬೇಕು ಎಂದುಕೊಂಡಿರುವವರೂ ಸಹ ತುಪ್ಪ ಸೇವನೆ ಮಾಡಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!