ಉದಯವಾಹಿನಿ ಮಂಗಳೂರು:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ರಾಜ್ಯ ಕಾರ್ಯಕಾರಣಿ ಸಮಿತಿ ಸಭೆ ದಕ್ಷಿಣ ಕನ್ನಡ ಜಿಲ್ಲೆಯ ಶಾಖೆ ಮಂಗಳೂರು ಇಲ್ಲಿ ನೌಕರ ಸಂಘದ ಅಧ್ಯಕ್ಷರಾದ ಸಿ ಎಸ್ ಷಡಕ್ಷರಿ ಇವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಜರುಗಿತು. ಸಂಘಕ್ಕೆ ಸಂಬಂಧಿಸಿದ ಎಲ್ಲಾ ಬೈಲಾ ನಿಯಮಾವಳಿಗಳ ಬಗ್ಗೆ ಸರ್ಕಾರಿ ನೌಕರರ ವರ್ಗಾವಣೆಯ ಬಗ್ಗೆ ವಾರ್ಷಿಕ ಸದಸ್ಯತ್ವ ಶುಲ್ಕು ಬಗ್ಗೆ ತಾಲೂಕ ಜಿಲ್ಲೆ ಮಹಾಸಭೆಗಳ ಕುರಿತು ಪತ್ರಿಕಾ ಪ್ರಕಟಣೆಯ ಬಗ್ಗೆ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ರುದ್ರಪ್ಪ ಶ್ರೀನಿವಾಸ ಮೋಹನಕುಮಾರ ಮಲ್ಲಿಕಾರ್ಜುನ ಬಳ್ಳಾರಿ ಬಸವರಾಜು ಸದಾನಂದ ಆನಂದ್ ಕುಮಾರ ಮೂಗಬಸವ ಶಿವಾನಂದ ಕುಡಸೋಮನ್ನವರ ಬಸವರಾಜ ಯಳ್ಳೂರ ಮಹಾಂತೇಶ ನಾಯಕ ಸೋಮು ಅಗಸಿಮನಿ ರಾಜ್ಯ ಸಂಘದ ಪದಾಧಿಕಾರಿಗಳು ಜಿಲ್ಲಾ ತಾಲೂಕ ಯೋಜನಾ  ಸಂಘದ ಅಧ್ಯಕ್ಷರು ರಾಜ್ಯ ಪರಿಷತ್ ಸದಸ್ಯರು ಕಾರ್ಯದರ್ಶಿಗಳು ಖಜಾಂಜಿಗಳು   ಸರಕಾರಿ ನೌಕರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!