ಉದಯವಾಹಿನಿ ದೇವದುರ್ಗ: ಕಳೆದ ಮೂರು ತಿಂಗಳಿಂದೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಜೈಲ್ ಸೇರಿದ ಆರೋಪಿ ಅನ್ವರ್ ಪಾಷ್ ಖಾಜಾಹುಸೇನ್, ರವಿವಾರ ಬೆಳಿಗ್ಗೆ 7ಗಂಟೆಗೆ ಉಪಕಾರಾಗೃಹದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಉಪಕಾರಾಗೃಹ ಸ್ಪುಡೆಂಟ್ ಸೇರಿ ಐದಾರು ಜನ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದು, ಗೋಡೆ ಮೇಲೆ ಏರಿ ಆರೋಪಿ ತಪ್ಪಿಸಿಕೊಂಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದೆ. ಎದಿನಂತೆ ಆರೋಪಿ ಬೆಳಿಗ್ಗೆ ಎದ್ದು, ಕೆಲಸ ಮಾಡುತ್ತಿದ್ದು ಅವನ್ನ ಜತೆ ಸಿಬ್ಬಂದಿಯೊಬ್ಬರು ಮಾತಾಡಿಸಿದ್ದು ಎಲ್ಲವೊ 6ಗಂಟೆ 55 ನಿಮಿಷಕ್ಕೆ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. 15ನಿಮಿಷದಲ್ಲಿ 15ಫೀಟ್ ಗೋಡೆ ಏರಿ ಪರಾರಿಯಾಗಿದ್ದು, ಮೇಲಧಿಕಾರಿಗಳಿಗೆ ಆಚ್ಚರಿಗೆ ಕಾರಣವಾಗಿದೆ. ಬಳ್ಳಾರಿ, ರಾಯಚೂರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಪ್ಪಿಸಿಕೊಂಡಿರುವ ಆರೋಪಿ ಬಂಧನಕ್ಕೆ ಅಧಿಕಾರಿಗಳ ತಂಡ ಜಾಲ ಬೀಸಿದ್ದಾರೆ. ಸಿಸಿಕ್ಯಾಮರಾ ಇದ್ದು, ಆರೋಪಿ ಗೋಡೆ ಮೇಲೆಯಿಂದ ಜಗಿದು ಹೊರಗಡೆ ಹೋಗುತ್ತಿರುವುದು ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಜೈಲ್ ಒಳಗೆ ಗೋಡೆ ಏರುತ್ತಿರುವುದು ಸೆರೆಯಾಗಿಲ್ಲ. ಇಂತಹ ಪ್ರಶ್ನೆ ಮೇಲಧಿಕಾರಿಗಳ ಆಚ್ಚರಿಗೆ ಕಾರಣವಾಗಿದೆ. ಹೇಳಿಕೊಳ್ಳುವಷ್ಟು ದೊಡ್ಡ ಜೈಲ್‍ಲಂತೂ ಅಲ್ಲ. ವಿವಿಧ ಪ್ರಕರಣದಲ್ಲಿ ಐದು ಜನ ಖೈದಿಗಳು ಇದ್ದು, ಅಧಿಕಾರಿ ಸೇರಿ ಕರ್ತವ್ಯದಲ್ಲಿ ಐದಾರು ಜನ ಸಿಬ್ಬಂದಿಗಳು ಇದ್ದರೂ, ಆರೋಪಿ ತಪ್ಪಿಸಿಕೊಂಡಿದ್ದು, ಅಧಿಕಾರಿಗಳ ಬೆಜವಬ್ದಾರಿ ಎದ್ದು ಕಾಣುತ್ತಿದೆ.
