
ಉದಯವಾಹಿನಿ ಮುದ್ದೇಬಿಹಾಳ: ಸರಕಾರ ದಿಂದ ಗ್ರಾಮ ಪಂಚಾಯಿತಿಗಳಿಗೆ ಸಾಕಷ್ಟು ಅನುದಾನ ಬರುತ್ತಿದೆ.ಆದರೆ ಸರಿಯಾದ ರೀತಿಯಲ್ಲಿ ಬಳಿಕೆ ಆಗುತ್ತಿಲ್ಲ.ಇದರಿಂದ ಗ್ರಾಮಗಳು ಸುದಾರಣೆಯಾಗುತ್ತಿಲ್ಲ. ಹೌದು ಇಂದು ನಾವು ಹೇಳುತ್ತಿರುವ ಸುದ್ದಿ ಎಲ್ಲಿದು ಅಂತೀರಾ ಇದು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಾರ್ಕಬ್ಬಿನಹಳ್ಳಿ ಗ್ರಾಮಕ್ಕೆ 2015 -16 ಸಾಲಿನಲ್ಲಿ 1 ಕೋಟಿ 25 ಲಕ್ಷ ರೂಪಾಯಿ ಎ ಎಸ್ ಪಾಟೀಲ್ ನಡಹಳ್ಳಿಯವರು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕರಿದ್ದಾಗ ಮಾರ್ಕಬ್ಬಿನಹಳ್ಳಿ ಗ್ರಾಮಕ್ಕೆ ಅನುದಾನ ಮಂಜೂರು ಮಾಡಿ ದಲಿತರ ಓಣಿಗೆ ಬಂದು ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದರು.ದಲಿತರ ಕೇರಿಯಿಂದಲೇ ಸಿಸಿ ರಸ್ತೆ ಮಾಡಬೇಕು ಅಂತ ಹೇಳಿದ್ದರು.ಆದರೆ ದೇವರು ವರ ಕೊಟ್ಟರು ಪೂಜಾರಿ ವರ ಕೊಡಲಿಲ್ಲ ಎಂಬ ಗಾದೆಯಿಂತೆ ಆಗಿನ ಭ್ರಷ್ಟ ಅಧಿಕಾರಿಗಳು ದಲಿತರ ಕೇರಿ ಸಿಸಿ ರಸ್ತೆ ಸಂಪೂರ್ಣ ಮಾಡದೆ ಅರ್ಧ ಕಾಮಗಾರಿ ಮಾಡಿ ಹೋಗಿದ್ದರಿಂದ ದಲಿತರಿಗೆ ಸಮಸ್ಯೆ ಯಾಗುತ್ತಿದೆ.ರಸ್ತೆ ಮೇಲೆ ಹರಿಯುವ ಚರಂಡಿ ನೀರು ಹಲವು ರೋಗ, ರುಜಿಗಳಿಗೆ ರಹದಾರಿಯಾಗಿದೆ. ಕೊಳಚೆ ನೀರಿನ ಮೇಲೆಯೇ ಮಕ್ಕಳು, ಮಹಿಳೆಯರು, ವಯೋವೃದ್ಧರು ನಿತ್ಯ ಓಡಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಚರಂಡಿ ನೀರಿನ ಈಗಿನ ಗ್ರಾಮ ಪಂಚಾಯಿತಿ ಸದಸ್ಯರು ಅಧ್ಯಕ್ಷರು ಸಂಬಂಧ ಪಟ್ಟ ಅಧಿಕಾರಿಗಳು ಕಂಡರು ಕಾಣದಂತೆ ಕಣ್ಣಿದ್ದೂ ಕುರುಡರಂತೆ ಕುಳಿತ್ತಿದ್ದಾರೆ.ಮಳೆ ಬಂತೆಂದರೆ ಮುಖ್ಯ ರಸ್ತೆಯಲ್ಲಿ ಚರಂಡಿ ತುಂಬಿ ರಸ್ತೆ ಮೇಲೆ ನೀರು ನಿಲ್ಲುತ್ತವೆ . ಚರಂಡಿ ತುಂಬಿದ ನೀರು ಸುಲಭವಾಗಿ ಹೋಗುವಂತೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಸಾರ್ವಜನಿಕರು ಬಳಸಿದ ನೀರು, ಬಚ್ಚಲು ನೀರು, ಕೊಚ್ಚೆ ನೀರಿನ ರೂಪತಾಳಿ ಮುಖ್ಯ ರಸ್ತೆ ಮೇಲೆ ನಿಂತು ಗಬ್ಬೆದ್ದು ನಾರುತ್ತಿದ್ದು. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಮಲೇರಿಯಾ ಡೆಂಗ್ಯೂ ಅಂತ ಸಾಂಕ್ರಾಮಿಕ ರೋಗಗಳು ಹರಡುವ . ಸಾದ್ಯತೆ ಇದೆ .ರಸ್ತೆಯಲ್ಲಿ ಸಂಚಾರಕ್ಕೂ ತೊಂದರೆ ಉಂಟಾಗಿದೆಯಲ್ಲದೇ ಈ ರಸ್ತೆ ದಾಟಲು ಜನರು ಪರದಾಡುವ ಸ್ಥಿತಿ ಉಂಟಾಗಿದೆ. ವಿದ್ಯಾರ್ಥಿಗಳ ಗೋಳಂತೂ ಹೇಳತೀರದು.ಈ ಚರಂಡಿ ಪಕ್ಕದ್ದಲ್ಲೇ ಉರ್ದು ಶಾಲೆ ಇದೆ ಸ್ವಲ್ಪ ಮುಂದಗಡೆ ಕನ್ನಡ ಗಂಡು ಮಕ್ಕಳು ಶಾಲೆ ಕೂಡಾ ಇದೆ. ಚರಂಡಿ ನೀರಿನಲ್ಲಿಯೇ ನಡೆದು ಪಾಲಕರು ತಮ್ಮ ಮಕ್ಕಳನ್ನು ಎತ್ತಿಕೊಂಡು ಹೋಗಿ ರಸ್ತೆ ದಾಟಿಸುವ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಸಾರ್ವಜನಿಕರು ಸಂಬಂಧಿ ಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ಒಂದು ವೇಳೆ ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರೆ ಕೆಲವೇ ದಿನಗಳಲ್ಲಿ ಮಾರ್ಕಬ್ಬಿನಹಳ್ಳಿ ಗ್ರಾಮ ಪಂಚಾಯಿತಿಗೆ ಬಿಗ್ ಮುದ್ರೆಹಾಕಿ ಹೋರಾಟ ಮಾಡುತ್ತೇವೆ ಎಂದು ಜಾಂಭವ ಯುವ ಸೇನಾ ವಿಜಯಪುರ ಜಿಲ್ಲಾ ಗೌರವ ಅಧ್ಯಕ್ಷರಾದ ಮಹಾಂತೇಶ ಹಾದಿಮನಿ ಎಚ್ಚರಿಕೆ ನೀಡಿದ್ದಾರೆ.

