
ಉದಯವಾಹಿನಿ ಸಿಂಧನೂರು: ಮಸ್ಕಿ ಕ್ಷೇತ್ರದಲ್ಲಿ ಬರುವ ತುರ್ವಿಹಾಳ ಹೋಬಳಿಯಲ್ಲಿ ನಡೆದ ಶ್ರೀರಾಘವೇಂದ್ರ ಸ್ವಾಮಿಗಳ ಮಠ, ಬ್ರಾಹ್ಮಣರ ಓಣಿಯ ಶ್ರೀರಾಮ ಮಂದಿರ ಮತ್ತು ರಾಯರ ಮಠದಲ್ಲಿ 352ನೇ ರಾಯರ ಆರಾಧನಾ ಮಹೋತ್ಸವದ ಪ್ರಯುಕ್ತ ಉತ್ತರರಾಧನೆ ರಥೋತ್ಸವ ಅದ್ದೂರಿಂದ ಜರುಗಿತು.ಬೆಳಗಿನ ಜಾವದಲ್ಲಿ ಸುಪ್ರಭಾತ, ರಾಯರ ಆಷ್ಟೋತ್ತರ, ಪಂಚಾಮೃತ ಅಭಿ ಷೇಕ, ಅಲಂಕಾರ, ವಿಶೇಷ ಪೂಜೆ, ವಿವಿಧ ಭಜನಾ ಮಂಡಳಿಗಳಿಂದ ಭಜನೆ, ವಿದ್ವಾಂಸರ ಪ್ರಕಾರ ಉಪನ್ಯಾಸ ನಡೆದವು.ಶ್ರೀರಾಮ ಮಂದಿರದಲ್ಲಿ ರಥೋತ್ಸವದ ಮುಗಿದ ಬಳಿಕ ವಿಪ್ರ ಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಆರ್.ವಿ.ಜೋಷಿ ಇವರು ಮುಖಂಡರಾದ ವೆಂಕಣ್ಣಾಚಾ ದೋಟಿಹಾಳ ಅವರ ಕುಟುಂಬದವರು ಕಡೆಯಿಂದ ಸನ್ಮನಿಸಿ ಗೌರವಿಸಿದರು. ತದನಂತರ ಭಕ್ತರಿಗೆ ದೋಟಿಹಾಳ ಕುಟುಂಬದವರು ತೀರ್ಥ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆದ ಅದ್ದೂರಿ ರಥೋತ್ಸವದಲ್ಲಿ ಪ್ರಹ್ಲಾದರಾಜರ ಮೂರ್ತಿ ಯ ಮೆರವಣಿಗೆ ನಡೆಸಿದರು. ಎಲ್ಲ ಭಕ್ತರು ಹಾಗೂ ವಿವಿಧ ಭಜನಾ ಮಂಡಳಿಯ ಸದಸ್ಯರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ನಗರದ ಡಬ್ಲ್ಯೂ ಡಿ ಕ್ಯಾಂಪಿನ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀರಾಮ ಭಜನಾ ಮಂಡಳಿ, ಪುರಂದರ ವಿಠಲ ಭಜನಾ ಮಂಡಳಿ ಸೇರಿದಂತೆ ವಿವಿಧ ಭಜನಾ ಮಂಡಳಿಗಳ ಸದಸ್ಯರು ರಥೋತ್ಸವದಲ್ಲಿ ಮನದುಂಬಿ ಹಾಡಿ ಗುರುರಾಯರಿಗೆ ಭಕ್ತಿ ಸಮರ್ಪಿಸಿದರು. ವಿವಿಧ ಕಡೆ ಭ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸವ ಸೇರಿದಂತೆ ಎಲ್ಲ ಸಮಾಜಗಳ ಮುಖಂಡರು ಪದಾಧಿಕಾರಿಗಳು ಭಾಗವಹಿಸಿದ್ದರು.
