
ಉದಯವಾಹಿನಿ ಬಾಗೇಪಲ್ಲಿ: ತಾಲ್ಲೂಕಿನ ಗೂಳೂರು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶನಿವಾರದಂದು ಬಡಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸಿಗಬೇಕೆಂಬ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಜನಸ್ಪಂದನ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಕರೆ ನೀಡಿದರು. ತಾಲೂಕಿನ ಗೂಳೂರು ಗ್ರಾಮದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ಅಡಿಯಲ್ಲಿ ಕುಂದುಕೊರತೆಗಳ ಅರ್ಜಿ ಸ್ವೀಕರಿಸುವ ಹಾಗೂ ಇತ್ಯರ್ಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರಿ ಕಚೇರಿಗೆ ಜನಸಾಮಾನ್ಯರು ಅಲೆದಾಡುವುದನ್ನು ತಪ್ಪಿಸಲು ಜನಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಂದಾಯ,ಕೃಷಿ,ತೋಟಗಾರಿಕೆ,ರೇಷ್ಮೆ ಸೇರಿದಂತೆ ಹಲವಾರು ಇಲಾಖೆಗಳಲ್ಲಿನ ಜನಸಾಮಾನ್ಯರು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಕಚೇರಿಗಳ ಸುತ್ತಲೂ ತಿರುಗಾಡುತ್ತಾರೆ.ಅಂತಹ ಸಮಸ್ಯೆಗಳಿದ್ದಲ್ಲಿ ಈ ಕಾರ್ಯಕ್ರಮದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಸಮಸ್ಯೆ ಪರಿಹರಿಸಿಕೊಳ್ಳಿ ಎಂದು ಹೇಳಿದರು. ಇದರ ಜೊತೆಗೆ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಕುರಿತು ಮಾಹಿತಿಯನ್ನೂ ಪಡೆಯಬಹದು ಎಂದು ತಿಳಿಸಿದರು.ಇಡೀ ಜಿಲ್ಲೆಯಲ್ಲೆ ನಮ್ಮ ತಾಲ್ಲೂಕಿನಲ್ಲಿ ಹೆಚ್ಚು ಬಾಲ್ಯವಿವಾಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಚಿಕ್ಕ ವಯಸ್ಸಿನಲ್ಲೆ ಮಕ್ಕಳಿಗೆ ಮದುವೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.ಹಾಗಾಗಿ ಯಾವುದೇ ತಂದೆ,ತಾಯಿ ಚಿಕ್ಕ ವಯಸ್ಸಿಗೆ ಮಕ್ಕಳಿಗೆ ಮದುವೆ ಮಾಡಬೇಡಿ,ಉತ್ತಮ ಶಿಕ್ಷಣ ಕೊಡಿಸಿ, ನಿಮ್ಮಿಂದ ಓದಿಸಲು ಸಾಧ್ಯವಾಗದಿದ್ದರೆ ತಿಳಿಸಿ ನಾನು ಸಹಾಯ ಮಾಡುತ್ತೇನೆ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಪಿಂಚಣಿ, ಆಶ್ರಯ ಯೋಜನೆ, ಸ್ಮಶಾನ, ಪಾವತಿ ಖಾತೆ, ಪಹಣಿ ತಿದ್ದುಪಡಿ, ಭೂ ಒತ್ತುವರಿ ತೆರವು,ಅರ್ಹ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಹಂಚಿಕೆ, ಪೋಡಿ ಪ್ರಕರಣ ಇತ್ಯರ್ಥ, ಇನ್ನೂ ಮುಂತಾದ ಸಮಸ್ಯೆಗಳನ್ನು ಶಾಸಕರು ಆಲಿಸಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಹಕಾರ ದಿಂದ ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿ ಇತ್ಯರ್ಥ್ಗಗೋಳಿಸಿದರು
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ವತಿಯಿಂದ ಮಾಹಿತಿ ಕೇಂದ್ರಗಳನ್ನು ತೆರೆದು ಜನಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ತಹಶಿಲ್ದಾರ್ ಪ್ರಶಾಂತ್ ಖಾನಗೌಡ ಪಾಟೀಲ್, ಇಓ ಜಿ.ವಿ. ರಮೇಶ್, ಟಿ.ಹೆಚ್.ಓ ಡಾ ಸಿ ಎನ್.ಸತ್ಯನಾರಾಯಣರೆಡ್ಡಿ, ಆರಕ್ಷಕ ವೃತ್ತ ನಿರೀಕ್ಷಕ ಪ್ರಶಾಂತ್ ವರ್ಣಿ, ರೇಷ್ಮೆ ಇಲಾಖೆ ಚಿನ್ನಕೈವಾರಮಯ್ಯ, ಪಶುವೈದ್ಯ ಇಲಾಖೆ ಕೃಷ್ಣಮೂರ್ತಿ, ಅರಣ್ಯ ಇಲಾಖೆ ಚಂದ್ರಶೇಖರ್ ರೆಡ್ಡಿ, ಪ್ರಭಾಕರ್, ಸಿ.ಡಿ.ಪಿ.ಓ. ರಾಮಚಂದ್ರ, ವೆಂಕಟರಾಮ್ ಹನುಮಂತರೆಡ್ಡಿ, ನರಸಿಂಹಾರೆಡ್ಡಿ, ಹನುಮಂತರೆಡ್ಡಿ, ಗೀತ ಹಾಗೂ ತಾಲ್ಲೂಕು ಎಲ್ಲಾ ಆಡಳಿತ ಮಂಡಳಿ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಮತ್ತು ಗೂಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಅನೋರಾಧ ರಮೇಶ್ ಬಾಬು ,ವೆಂಕಟರಾಯಪ್ಪ, ಹಾಗೂ ಎಲ್ಲಾ ಇಲಾಖೆಯ ಮುಖ್ಯಸ್ಥರು ಹಾಜರಿದ್ದರು.
