ಉದಯವಾಹಿನಿ, ಹೈದರಾಬಾದ್ : ಹಲವು ಬಾಲಿವುಡ್ ಚಿತ್ರಗಳು ಬಿಡುಗಡೆಯಾಗಿದ್ದು, ಸೌತ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೈಲರ್ ಗಲ್ಲಾಪೆಟ್ಟಿಗೆ ದೋಚಿದ ನಂತರ,ಈಗ ಗಲ್ಲಾಪೆಟ್ಟಿಗೆಯಲ್ಲಿ ಡ್ರೀಮ್ ಗರ್ಲ್ ೨ಗೆ ಪೈಪೋಟಿ ನೀಡಲು ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಅಭಿನಯದ ಕುಶಿ ಚಿತ್ರ ಸೆಪ್ಟೆಂಬರ್ ೧ ರಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದೆ.
ಚಿತ್ರದ ಮೊದಲ ದಿನದ ಗಳಿಕೆಯು ಆಯುಷ್ಮಾನ್ ಖುರಾನಾ ಮತ್ತು ಅನನ್ಯಾ ಪಾಂಡೆ ಅವರ ಡ್ರೀಮ್ ಗರ್ಲ್ ೨ ಗಿಂತ ಹೆಚ್ಚಾಗಿದೆ. ಅಷ್ಟೇ ಅಲ್ಲ, ಕುಶಿ ಮೊದಲ ದಿನವೇ ೧೫ ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ಆದರೆ, ವಾರಾಂತ್ಯದಲ್ಲಿ ಚಿತ್ರ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಬಾಕ್ಸ್ ಆಫೀಸ್ ಟ್ರ್ಯಾಕರ್ ಸಚ್ನಿಕ್ ಅವರ ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಅಭಿನಯದ ಕುಶಿ ೧೬ ಕೋಟಿ ರೂ.ಗೆ ತೆರೆದುಕೊಂಡಿದೆ, ಇದುವರೆಗಿನ ಕಲೆಕ್ಷನ್ ಭಾರತದಲ್ಲಿ ೧೬ ಕೋಟಿ ರೂ. ವಿಶ್ವದಾದ್ಯಂತ ಗಳಿಕೆ ಬಗ್ಗೆ ಹೇಳುವುದಾದರೆ ಕುಶಿ ವಿಶ್ವಾದ್ಯಂತ ೫೨.೫ ಕೋಟಿ ಬ್ಯುಸಿನೆಸ್ ಮಾಡಿದೆ ಎನ್ನಲಾಗುತ್ತಿದೆ.
