ಉದಯವಾಹಿನಿ,ನ್ಯೂಯಾರ್ಕ್ : ಯುಎಸ್ ಅಧ್ಯಕ್ಷ ಜೋ ಬೈಡನ್ ಅವರ ಪತ್ನಿ ಮತ್ತು ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರು ಕೋವಿಡ್ -೧೯ ಸೋಂಕಿಗೆ ಒಳಗಾಗಿದ್ದಾರೆ. ಅವರು ಕೋವಿಡ್‌ನ ಸೌಮ್ಯ ಲಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಶ್ವೇತಭವನ ಹೇಳಿಕೆ ನೀಡುವ ಮೂಲಕ ಮಾಹಿತಿ ನೀಡಿದೆ.
ಪ್ರಸ್ತುತ ಅವರನ್ನು ಡೆಲವೇರ್‌ನ ರೆಹೋಬೋತ್ ಬೀಚ್‌ನಲ್ಲಿರುವ ಅವರ ಮನೆಯಲ್ಲಿ ಇರಿಸಲಾಗಿದೆ. ಎರಡು ದಿನಗಳ ನಂತರ, ಅವರು ಜಿ-೨೦ ಶೃಂಗಸಭೆಯಲ್ಲಿ ಭಾಗವಹಿಸಲು ಜೋ ಬೈಡೆನ್ ಅವರೊಂದಿಗೆ ನವದೆಹಲಿಗೆ ಬರಬೇಕಿತ್ತು.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರಿನ್ ಜೀನ್-ಪಿಯರೆ ಪ್ರಸ್ತುತ ಜಿಲ್ ಬೈಡೆನ್ ಅವರ
ಕೋವಿಡ್ -೧೯ ಸೋಂಕಿಗೆ ಒಳಗಾಗಿದ್ದಾರೆ ಎಂಬ ಮಾಹಿತಿ ನೀಡಿ ಆದರೆ ವಾರವಿಡೀ ಪರೀಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ.
