ಉದಯವಾಹಿನಿ, ಹುಮನಾಬಾದ:  ತಾಲೂಕಿನ ಸಿಂದಬಂದಗಿ ಹಾಗೂ ಡಾಕುಳಗಿ ಗ್ರಾಮಗಳ ಮಧ್ಯದಲ್ಲಿ ಮಂಗಳವಾರ ಬೆಳಗ್ಗೆ ಲಘು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 2.6ರಷ್ಟು ತೀವ್ರತೆ ದಾಖಲಾಗಿರುವ ಹಿನ್ನೆಲೆ ತಹಸಿಲ್ದಾರ್ ಅಂಜುಮ್ ತಬಸುಮ್ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಿಂದಬಂದಗಿ ಗ್ರಾಮದಿಂದ 1.5 ಕಿಮೀ ಅಂತರದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. ಬೆಳಗ್ಗೆ 9.11 ಗಂಟೆಗೆ ಲಘು ಭೂಕಂಪನದ ಅನುಭವ ಗ್ರಾಮಸ್ಥರಿಗೆ ಆಗಿದೆ. ಆದರೆ ಸಾರ್ವಜನಿಕರ ಆಸ್ತಿ ,ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲಾಡಳಿತದಿಂದ ಮಾಹಿತಿ ಪಡೆದ ತಹಸೀಲ್ದಾರ್ ಅಂಜುಮ್ ತಬಾಸುಮ್, ಗ್ರೇಡ್-2 ತಹಸೀಲಾರ್ ಮಂಜುನಾಥ ಅವರು ಕಡಿಮೆ ತೀವ್ರತೆಯ ಲಘು ಭೂಕಂಪನ ಸಂಭವಿಸಿರುವ ಕಾರಣ ಯಾರು ಕೂಡ ಹೆದರಬಾರದು ಎಂದು ಜನರಲ್ಲಿ ಆತ್ಮವಿಶ್ವಾಸ ತುಂಬವ ಕೆಲಸ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!