
ಉದಯವಾಹಿನಿ ಮುದ್ದೇಬಿಹಾಳ ; ಜನಜೀವನ ಮಶಿನ್ ಯೋಜನೆ ಅಡಿಯಲ್ಲಿ ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಕೆಯನ್ನು ಸದ್ಬಳಕೆಯನ್ನು ಜನರು ಮಾಡಿಕೊಳ್ಳ ಬೇಕು ಎಂದು ಶಾಸಕ ಸಿ.ಎಸ್ ನಾಡಗೌಡ ಅಪ್ಪಾಜಿ ಹೇಳಿದರು. ಮಂಗಳವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಲಜೀವನ ಮಶಿನ್ ಯೋಜನೆ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಗ್ರಾಮಸ್ಥರನ್ನು ಉದ್ದೇಶಿಸಿ ಅವರು ಮಾತನಾಡಿದರಜೆಜೆಎಂ ಕಾಮಗಾರಿ ಸಮರ್ಪಕವಾಗಿ ಮಾಡಬೇಕು ಎಂದು ಗುತ್ತಿಗೆದಾರರಿಗೆ ತಿಳಿಸಿದ ಶಾಸಕರು ಈ ಶುದ್ಧ ಕುಡಿಯುವ ನೀರಿನ ಪೈಪ್ ಗಳನ್ನು ಸಮರ್ಪಕವಾಗಿ ಜೋಡಣೆ ಮಾಡಿ ಮನೆ ಮನೆಗೆ ಸಂಪರ್ಕ ನೀಡಬೇಕು ಮತ್ತು ಈ ಜೆಜೆಎಂ ಗೆ ಅನಧಿಕೃತ ಬೇರೆ ಸಂಪರ್ಕ ಯಾರು ಮಾಡಬಾರದು ಮಾಡಿದರೆ ಅದಕ್ಕೆ ದಂಡವನ್ನು ನೀಡಬೇಕಾಗುತ್ತದೆ ಎಂದರು. ಕೇಂದ್ರ ಮತ್ತು ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಈ ಯೋಜನೆಯಿಂದ ಜನರ ಮನೆ ಮನೆಗೆ ಶುದ್ಧ ನೀರು ಪೂರೈಕೆ ಆಗುತ್ತದೆ ಎಂದು ಶಾಸಕರು ಹೇಳಿದರು. ಹಂದ್ರಾಳ, ವನಹಳ್ಳಿ, ಮಡಿಕೇಶ್ವರ, ಬಳವಾಟ, ತಾರನಾಳ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿಗೆ ಭೂಮಿ ಪೂಜೆಯ ಮೂಲಕ ಚಾಲನೆಯನ್ನು ಶಾಸಕ ನಾಡಗೌಡ ನೀಡಿ ಗ್ರಾಮಸ್ಥರ ಅಹವಾಲು ಸಮಸ್ಯೆಗಳನ್ನು ಆಲಿಸಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಪೂನ್ ಮುಖಾಂತರ ಸಮಸ್ಯೆಗಳನ್ನು ಗಮನಕ್ಕೆ ತಂದರು. ಶಾಲಾ ಕೂಠಡಿಗಳ ದುರಸ್ತಿ, ಮಳೆಗೆ ಸುಸಜ್ಜಿತ ನೂತನ ಶಾಲೆಗಳ ಸೂರುತ್ತಿರುವ ಬಗ್ಗೆ ಮತ್ತು ಬೀರಲಿಂಗೇಶ್ವರ ಸಾಂಸ್ಕೃತಿಕ ಭವನ, ಮರಗೇಮ್ಮ ದೇವಾಲಯ, ಪಶು ಆಸ್ಪತ್ರೆ ನಿರ್ಮಾಣ, ಶೌಚಾಲಯ, ಗ್ರಂಥಾಲಯ ನಿರ್ಮಾಣ ಕುರಿತು ಶಾಸಕರ ಬಳಿ ಗ್ರಾಮಸ್ಥರು ಮನವಿಯನ್ನು ಮಾಡಿದರು. ಈ ಸಂದರ್ಭದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಎಇಇ ಆರ್ ಎಸ್ ಹಿರೇಗೌಡರ, ತಾಳಿಕೋಟಿ ತಾಪಂ ಇಒ ಬಿ.ಆರ್ ಬಿರಾದಾರ ಇಂಜಿನಿಯರ್ ರವಿ ಆಸಂಗಿ,ಮಡಿಕೇಶ್ವರ ಗ್ರಾಪಂ ಅಧ್ಯಕ್ಷ ಬಸನಗೌಡ ಸಾಸನೂರ, ಬಾವೂರ ಗ್ರಾಪಂ ಅಧ್ಯಕ್ಷೆ ಶಾರದಾ ಎಂ ಹಡಪದ, ಪಿಡಿಓ ಬಿ ಎಸ್ ಹಿರೇ ಕುರಬರ, ಕಾರ್ಯದಲ್ಲಿ ಯಮನೂರಿ ಲಮಾಣಿ, ಗುತ್ತಿಗೆದಾರ ಎಸ್ ಬಿ ಕರೆಕಲ್, ಜಿ ಆರ್ ಬಿರಾದಾರ ( ಪಾಟಿಲ್) ಸಾಲಿಮಠ , ಮುತ್ತು ಪಾಟೀಲ್, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ನಾಡಗೌಡ, ದೇವೇಂದ್ರ ವಾಲಿಕಾರ,ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
