
ಉದಯವಾಹಿನಿ ಮುದ್ದೇಬಿಹಾಳ; ಮುದ್ದೇಬಿಹಾಳ ಪಟ್ಟಣದಿಂದ ಸುಕ್ಷೇತ್ರ ಧರ್ಮಸ್ಥಳಕ್ಕೆ ನೂತನ ಸಾರಿಗೆ ಬಸ್ ಗೆ ಚಾಲನೆಯನ್ನು ಶಾಸಕ ಸಿ.ಎಸ್ ನಾಡಗೌಡ ಅಪ್ಪಾಜಿ ನೀಡಿದರು
ಬುಧುವಾರ ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ಧರ್ಮಸ್ಥಳ ಬಸ್ ಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಚಾಲನೆಯನ್ನು ನೀಡಿ ಮಾತನಾಡಿದ ಶಾಸಕರು ಅನೇಕ ಸುಕ್ಷೇತ್ರಗಳಿಗೆ ಬಸ್ ಬಿಡಬೇಕು ಎನ್ನುವ ಬೇಡಿಕೆಯ ಮಧ್ಯೆ ವಿಶೇಷವಾಗಿ ನಮ್ಮ ಮುದ್ದೇಬಿಹಾಳದಿಂದ ಸುಕ್ಷೇತ್ರ ಧರ್ಮಸ್ಥಳಕ್ಕೆ ಬೇಡಿಕೆ ಇತ್ತು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರ ಬಳಿ ನಮ್ಮ ಮತಕ್ಷೇತ್ರದ ಮಹಾ ಜನತೆ ಪರವಾಗಿ ಧರ್ಮಸ್ಥಳ ಕ್ಕೆ ಹೊಸ ಬಸ್ ಬಿಡಲು ಮನವಿಯನ್ನು ಮಾಡಿದ್ದೆ ಅದರಂತೆ ಇಂದು ಹೊಸ ಬಸ್ ಗೆ ಚಾಲನೆಯನ್ನು ನೀಡಿದ್ದು ಮುಂಬರುವ ದಿನಗಳಲ್ಲಿ ಇದೆ ಧರ್ಮಸ್ಥಳಕ್ಕೆ ಸ್ಲಿಪರ್ ಕೋಚ್ ಬಸ್ ಆರಂಭವಾಗಲಿದೆ ಈ ಬಸ್ ನಲ್ಲಿ ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರು ಉಚಿತವಾಗಿ ಪಯಣಿಸಬಹುದು ಎಂದರು. ಮುಂಬೈ ಹುಬ್ಬಳ್ಳಿ ಗೆ ವಾಣಿಜ್ಯ ಉದ್ದೇಶಕ್ಕೆ ಬಸ್ ಬಿಡಲು ಮತ್ತು ಮುದ್ದೇಬಿಹಾಳ ಡಿಪೋ ದಿಂದ ಬೆಂಗಳೂರಿಗೆ ಎಸಿ ಬಸ್ ಆರಂಭಿಸಲು ಜನರ ಬೇಡಿಕೆಯ ಕುರಿತು ಮಾಧ್ಯಮಗಳ ಪ್ರಶ್ನೆಗೆ ಬಸ್ ನೂತನ ಬಸ್ ಆರಂಭಿಸುವ ಭರವಸೆಯನ್ನು ಶಾಸಕರು ನೀಡಿದರು ಮತ್ತು ಈ ವೇಳೆ ಮುದ್ದೇಬಿಹಾಳ ಪಟ್ಟಣದಿಂದ ಹಡಗಲಿ ಗ್ರಾಮಕ್ಕೆ ಸಹ ಬಸ್ ಗೆ ಚಾಲನೆಯನ್ನು ನೀಡಲಾಯಿತು ಗ್ರಾಮ ಸಭೆ ಸಂದರ್ಭದಲ್ಲಿ ಗ್ರಾಮಸ್ಥರು ಹಡಗಲಿ ಗ್ರಾಮಕ್ಕೆ ಬಸ್ ಸಮಸ್ಯೆ ಹೇಳಿದ್ದರು.
ಮುದ್ದೇಬಿಹಾಳದಿಂದ ಪ್ರತಿ ನಿತ್ಯ ಸಾಯಂಕಾಲ 5 ಗಂಟೆ ಗೆ ಧರ್ಮಸ್ಥಳ ಕ್ಕೆ ಬಸ್ ಹೊರಡುತ್ತದೆ ಮತ್ತು ಧರ್ಮಸ್ಥಳದಿಂದ ಮುದ್ದೇಬಿಹಾಳ ಕ್ಕೆ ಸಾಯಂಕಾಲ 4:30 ಕ್ಕೆ ಬರುತ್ತದೆ.
ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಅಬ್ದುಲ್ ಗಫೂರ ಮಕಾನದಾರ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ಬಾಪುಗೌಡ ದೇಸಾಯಿ, ಪಿಂಟು ಸಾಲಿಮನಿ,ಸಿಕಂದರ ಜಾನ್ವೇಕರ,ಸಾರಿಗೆ ಘಟಕ ವ್ಯವಸ್ಥಾಪಕ ಎ ಹೆಚ್ ಮಧಬಾವಿ, ಸಾರಿಗೆ ಇಲಾಖೆಯ ಬಿ ಆರ್ ಬಾಗವಾನ,ಎಸ್ ಬಿ ಪಾಟೀಲ್, ಎಸ್ ಎಂ ಹೂಳಿ,ಬಿ.ಎನ್ ಪಾಟೀಲ್, ಯಮನಪ್ಪ ಹಂಗರಗಿ ಸೇರಿದಂತೆ ಸಾರಿಗೆ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.
