
ಉದಯವಾಹಿನಿ ಸಿಂಧನೂರು: ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ 03 ವಸತಿ ನಿಲಯದಲ್ಲಿ ಸರಿಯಾಗಿ ಮೂಲಭೂತ ಸೌಕರ್ಯಗಳ ಇಲ್ಲದೆ ವಿದ್ಯಾರ್ಥಿಗಳ ಪಾಡು ಅಯೋಮಯ ಸ್ಥಿತಿ ನಿರ್ಮಾಣವಾಗಿದ್ದರು ಸಹ ಕ್ಯಾರೇ ಎನ್ನದೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ತಂದೆ ತಾಯಿ ಅವರು ಜೀವನ ನಡೆಸುವುದೇ ಕಷ್ಟ ಎಂದು ಸರ್ಕಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಸತಿ ನಿಲಯ ನಿರ್ಮಾಣವಾಗಿದ್ದು.ಸರಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿ ಗಾಗಿ ಯೋಜನೆಗಳು ಅನುಷ್ಠಾನಕ್ಕೆ ತಂದು ಸಾವಿರಾರು ಕೋಟಿ ಅನುದಾನವನ್ನು ಬಿಡುಗಡೆ ಮಾಡುತ್ತದೆ. ಆದರೆ ಅಧಿಕಾರಿಗಳ ಮಾತ್ರ ಸರಿಯಾದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅನುದಾನವನ್ನು ಖರ್ಚು ಮಾಡುತ್ತಿಲ್ಲ.ಏಕೆಂದರೆ ಅಧಿಕಾರಿಗಳು ವಿದ್ಯಾರ್ಥಿಗಳ ಬಗ್ಗೆ ಸರ್ಕಾರಕ್ಕೆ ಒಂದು ಮಾಹಿತಿ ದಾಖಲೆ ನೀಡಿ. ಮತ್ತೊಂದು ಮಾಹಿತಿ ದಾಖಲೆಗಳ ತಮ್ಮಲ್ಲಿಟ್ಟುಕೊಂಡು ಅನುದಾನವನ್ನು ಖರ್ಚು ಮಾಡಿದ್ದೇವೆ ಎಂದು. ತಿಂದು ತೇಗುತ್ತಾರೆ.ಅಧಿಕಾರಿಗಳು
ನಗರದಲ್ಲಿ ಇರುವ 03 ಹಾಸ್ಟೆಲ್ ಗಳಲ್ಲಿ ಸರಿಯಾದ ವಾರ್ಡನ್ ಗಳು ಇಲ್ಲ. ಸ್ವಚ್ಛತೆ ಇಲ್ಲ ನೀರು ಸರಿಯಾದ ಸಮಯಕ್ಕೆ ನೀರು ಇಲ್ಲದೆ ಟಾಯ್ಲೆಟ್ ದುರ್ವಾಸನೆ ಬೀರುತ್ತಿದೆ. ಹಾಸ್ಟೆಲ್ಲಿನ ಗೋಡೆಗಳು ಸ್ವಚ್ಛತೆ ಇಲ್ಲದೆ ಕೆಂಪಾಗಿದ್ದು. ಜಾತಿ ಮೂಲ ನಿರ್ಮಿಸಿ ಬೆದರಿಕೆ ಹಾಕುತ್ತಾರೆ. ಇಲ್ಲಿಯೇ ಅಧಿಕಾರಿಗಳು.ಮತ್ತು ಹಾಸ್ಟೆಲಿನಲ್ಲಿ ಸರಿಯಾದ ಕ್ವಾಲಿಟಿ ತರಕಾರಿ ನೀಡುತ್ತಿಲ್ಲ. ಓದುವುದಕ್ಕೆ ಗ್ರಂಥಾಲಯ ಇಲ್ಲ. G.B.C. ಹಾಸ್ಟೆಲ್ ನಲ್ಲಿ ರೂಂನ ಕೊರತೆ ಇದ್ದು. ಯಾವುದೇ ರೀತಿಯ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದೆ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ವಿದ್ಯಾರ್ಥಿಗಳು ಎಷ್ಟು ಸಲ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದರು ಸಹ ಯಾರು ಕ್ಯಾರೆ ಮಾಡುತ್ತಿಲ್ಲ.
ಜಿ.ಬಿ.ಸಿ.ಎಚ್. ಮತ್ತು ಅಡಿಗೆ ಮಾಡುವ ಸಿಬ್ಬಂದಿ ವರ್ಗದವರಿಗೆ ಸುಮಾರು 10 ತಿಂಗಳ ಕಾಲ ಕಳೆದರು ಸಹ ಸಂಬಳ ನೀಡಿರುವುದಿಲ್ಲ ಮತ್ತು ಸಂಬಳ ಕೇಳಿದರೆ ಸಾಕು ಅವರಿಗೆ ನಿಮ್ಮನ್ನು ಕೆಲಸದಿಂದ ತೆಗೆದು ಹಾಕುತ್ತವೆ ಎಂದು ಬೆದರಿಕೆ ಹಾಕುತ್ತಾರೆ. ಯಾರಿಗೂ ಸಹ ದಿನಾಂಕದೊಂದಿಗೆ ಸಂಬಳ ನೀಡುತ್ತಿಲ್ಲ.
