
ಉದಯವಾಹಿನಿ ಬೆಂಗಳೂರು: ಶಾಲೆಗೆ ಬರುವ ಮಕ್ಕಳಿಗೆ ಸಮಾಜದ ಜವಾಬ್ದಾರಿಯುತ ವ್ಯಕ್ತಿಯಾನ್ನಾಗಿ ಮಾಡುವುದು ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯ ಅಂತಹ ಸಾಲಿಗೆ ನಗರದ ವಿಭೂತಿಪುರ ಸರ್ಕಾರಿ ಶಾಲೆ ಶಿಕ್ಷಕಿ ಶ್ರೀಮತಿ ಶೀಲಾ.ಆರ್ ಅವರು ನಿಲ್ಲುತ್ತಾರೆ. ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗಳು ಇವರೇ ಅಚ್ಚುಮೆಚ್ಚಿನ ಶಿಕ್ಷಕಿ. ಆಟ, ಪಾಠ, ಕುಣಿತ, ಹಾಡುಗಳ ಮೂಲಕ ಮಕ್ಕಳ ಮನಸ್ಸಲ್ಲಿ ಮನೆ ಮಾಡೊದ್ದಾರೆ. ಸ್ಥಳೀಯದಿಂದ ಶಾಲೆಗೆ ಬರುವ ಬಡಮಕ್ಕಳ ಟೆಂಟಗಳಿಗೆ ತೆರಳಿ ವಾರಕ್ಕೊಮ್ಮೆ ಕೋವಿಡ್ ಸಂದರ್ಭದಲ್ಲಿ ತಮ್ಮ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ನೋಟ್ ಪುಸ್ತಕ, ಸಮವಸ್ತ್ರ, ಬ್ಯಾಕ್, ಶೋಗಳನ್ನು ಸೇರಿದಂತೆ ಅವರ ಕುಟುಂಬಕ್ಕೆ ಅಗತ್ಯ ದಿನಸಿ ಪದಾರ್ಥಗಳನ್ನು ನೀಡಿ ಹಲವು ಮಕ್ಕಳ ಪಾಲಿಗೆ ತಾಯಿಯಾಗಿದ್ದಾರೆ. ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಹಸಿದ ಕುಟುಂಬಗಳಿಗೆ ಸಹಾಯ ಮಾಡುತ್ತ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಗೌರವಿಸಿ ಪ್ರಶಂಸೆ ನೀಡಿದೆ. ಇತ್ತೀಚಿಗಿ ನಡೆದ ಬೆಂಗಳೂರು ನಗರ ದಕ್ಷಿಣ ಜಿಲ್ಲೆಯ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕರಿಗೆ “ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ”ಯನ್ನು ಸ.ಹಿ.ಪ್ರಾ.ಶಾಲೆ ಶಿಕ್ಷಕಿ ಶೀಲಾ.ಆರ್ ಅವರಿಗೆ ಶ್ಲಾಘನೀಯ ಸೇವೆ ಮೆಚ್ಚಿ ಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹ ಮಾದರಿ ಶಿಕ್ಷಕರು ಪ್ರತಿಯೊಂದು ಶಾಲೆಯಲ್ಲಿರಲ್ಲಿ ಹಾಗೂ ಈಗೇ ಶಿಕ್ಷಕಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಲಿ ಎಂಬುದು ಪತ್ರಿಕೆ ಹಾರೈಕೆ.
