ಉದಯವಾಹಿನಿ ಸಿರುಗುಪ್ಪ : ನಗರದ ಸಿಡಿಪಿಓ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ತಾಲೂಕಾಡಳಿತ ಹಾಗೂ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಶಾಸಕ ಬಿ.ಎಮ್.ನಾಗರಾಜ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಸಮಾಜದ ವತಿಯಿಂದ ಶ್ರೀಕೃಷ್ಣರ ದೇವಸ್ಥಾನ, ವಿದ್ಯಾರ್ಥಿ ನಿಲಯ, ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗುವ ನಿಮ್ಮ ನಿರ್ಧಾರ ಆದರ್ಶಪ್ರಾಯವಾಗಿದ್ದು, ಸರ್ಕಾರದಿಂದ ಭವನಕ್ಕೆ ನಿರ್ಮಿಸಲು ಅನುದಾನ ನೀಡಬೇಕಾದರೆ ದಾನವಾಗಿ ನೀಡಿದ ಜಮೀನು ಸರ್ಕಾರದ ಸ್ವತ್ತಿಗೆ ಬರೆದುಕೊಡಬೇಕು.ಸರ್ಕಾರದ ವತಿಯಿಂದ ವಿವಿಧ ಇಲಾಖೆಗಳಿಂದ ಬರುವ ಅನೇಕ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲೀಕರಣಗೊಂಡು ಇನ್ನಿತರರಿಗೆ ನೆರವಾಗಬೇಕೆಂದು ತಿಳಿಸಿದರು.ತಾಲೂಕು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಶೀಲ್ದಾರ್ ಹೆಚ್.ವಿಶ್ವನಾಥ ಅವರು ಮಾತನಾಡಿ ತಾಲೂಕಿನಲ್ಲಿ ಶ್ರೀಕೃಷ್ಣನ ಗುಡಿಯಿಲ್ಲವೆಂದು ಪಣ ತೊಟ್ಟಿರುವ ನಿಮಗೆ ಇಲಾಖೆಯಿಂದ ಅಗತ್ಯ ಸಹಾಯವನ್ನು ನೀಡಲಾಗುವುದು ಭಗವದ್ಗೀತೆಯ ಮೂಲಕ ಉತ್ತಮ ಸಂದೇಶ ಸಾರಿದ ಶ್ರೀಕೃಷ್ಣರನ್ನು ಪೂಜಿಸದ ದೇಶಗಳೇ ಇಲ್ಲವೆಂದು ತಿಳಿಸಿದರು.ಜಯಂತಿಯ ಕುರಿತು ಹಿರಿಯ ಶಿಕ್ಷಕ ಜೆ.ನರಸಿಂಹಮೂರ್ತಿ ಹಾಗೂ ಗುರುರಾಜ ಆಚಾರ್ಯ ಅವರು ವಿಶೇಷ ಭಾಷಣ ಮಾಡಿದರು.
ಇದೇ ವೇಳೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಬಿ.ಪಾಟೀಲ್, ತಾ.ಪಂ.ವ್ಯವಸ್ಥಾಪಕಿ ಸುಜಾತ, ಪಂಚಾಯತ್ ರಾಜ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತಿಪ್ಪೆಸ್ವಾಮಿ, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಗಾದಿಲಿಂಗಪ್ಪ, ಜಿಲ್ಲಾ ಯಾದವ ಸಮಾಜದ ಗೌರವಾಧ್ಯಕ್ಷ ಡಾ.ಮದುಸೂಧನ್ ಕಾರಿಗನೂರು, ತಾಲೂಕು ಅಧ್ಯಕ್ಷ ಪಕ್ಕೀರಪ್ಪ ನಗರಸಭೆ ಸದಸ್ಯರಾದ ಬಿ.ಎಮ್.ಅಪ್ಪಾಜಿ, ಗಣೇಶ ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಯಾದವ ಸಮಾಜದವರು ಇದ್ದರು.
