ಉದಯವಾಹಿನಿ ಸಿರುಗುಪ್ಪ : ತಾಲೂಕಿನಲ್ಲೆಡೆ ಮೂರು ದಿನಗಳಿಂದ ವರುಣನ ಸಿಂಚನದಿAದಾಗಿ ಮಲೆನಾಡಿನಂತೆ ತಂಪು ವಾತಾವರಣವುಂಟಾಗಿದ್ದು, ತುಂಗಾಭದ್ರ ಮತ್ತು ವೇದಾವತಿ ನದಿಗೆ ನೀರಿಲ್ಲದೇ ಕಂಗಾಲಾಗಿದ್ದ ಅನ್ನದಾತರ ಪಾಲಿನ ಅಮೃತಧಾರೆಯಾಗಿ ಹರುಷ ತಂದಿದೆ.
ಪ್ರತಿವರ್ಷ ಜುಲೈ ಅಂತ್ಯದ ವೇಳೆಗೆಲ್ಲಾ ಮುಗಿಯುತ್ತಿದ್ದ ಕೃಷಿ ಚಟುವಟಿಕೆಗಳು ಈ ಸಲ ಆರಂಭದಲ್ಲಿ ಕೈಕೊಟ್ಟ ಮಳೆಯಿಂದಾಗಿ ಈ ಭಾಗದ ಜನರಿಗೆ ವರವಾಗಿದ್ದ ತುಂಗಭದ್ರ ಜಲಾಶಯವೂ ಭರ್ತಿಯಾಗದೇ ನದಿಯೂ ಬತ್ತಿಹೋಗಿ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರಿಲ್ಲದೇ ಪರದಾಡುವಂತಹ ಭೀಕರ ಬರದ ಸ್ಥಿತಿ ಬಂದೊದಗಿತ್ತು.
ಮುಂದಿನ ದಿನಗಳಲ್ಲಾದರೂ ಮಳೆಯಾಗಬಹುದೆಂಬ ಉದ್ದೇಶದಿಂದ ನದಿಯಲ್ಲಿ ತಗ್ಗು ಗುಂಡಿಗಳಲ್ಲಿ ನಿಂತ ನೀರು ಬಳಸಿ ಅನ್ನದಾತರು ಭತ್ತದ ನಾಟಿಗಾಗಿ ಹಾಕಲಾಗಿದ್ದ ಸಸಿಮಡಿ ಮತ್ತು ಭತ್ತದ ಗದ್ದೆಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋದ ಪರಿಸ್ಥಿತಿ ಕಂಡುಬAದಿತು. ಇನ್ನೂ ಕೆಲ ರೈತರ ಭತ್ತದ ಸಸಿಮಡಿಗಳು ಗದ್ದೆಗಳು ನೀರಿಲ್ಲದೇ ಕುರಿದನಗಳನ್ನು ಮೇಯಿಸುವಂತಾಗಿತು.
ಅಲ್ಲಲ್ಲಿ ಕೊಳವೆ ಭಾವಿಗಳ ನೀರಾವರಿ ಹೊಂದಿರುವ ರೈತರ ಜಮೀನು ಹಸಿರಾಗಿರುವುದು ಬಿಟ್ಟರೆ ನದಿಗಳು ಮತ್ತು ಕಾಲುವೆ ನೀರನ್ನು ನಂಬಿ ಕೂರಿಗೆ ಬಿತ್ತನೆ ಮಾಡಿರುವ ಹಾಗೂ ಐತಿಹಾಸಿಕ ವಿಜಯನಗರ ಕಾಲುವೆಗೆ ನಗರದ ಚರಂಡಿ ನೀರು ಸೇರುತ್ತಿರುವುದರಿಂದ ರೈತರ ಗೋಳು ಹೇಳತೀರದಾಗಿದೆ.
ಶ್ರಾವಣ ಮಾಸದಲ್ಲಿ ಪ್ರವಾಹದಿಂದ ತುಂಬಿ ತುಳುಕುತ್ತಿದ್ದ ನದಿ, ಹಳ್ಳಗಳ್ಳಿಂದ ಹಚ್ಚ ಹಸಿರಿನಿಂದ ಕಾಣುತ್ತಿದ್ದ ಜಮೀನುಗಳು ನಾಟಿಯಿಲ್ಲದೇ ವರುಣನ ಆರ್ಭಟವಿಲ್ಲದೇ ಬಯಲಾಗಿ ಕಾಣುತ್ತಿವೆ.
ತುಂಗಾಭದ್ರ ಜಲಾಶಯದ ಮೇಲ್ಭಾಗದಲ್ಲಿ ಇನ್ನೂ ಉತ್ತಮವಾಗಿ ಮಳೆಯಾದಲ್ಲಿ ಮುಂದಿನ ದಿನಗಳಲ್ಲಾದರೂ ಎರಡನೇ ಬೆಳೆಯ ನಾಟಿಗಾದರೂ ನೀರು ದೊರೆಯಬಹುದೆಂಬುದಾಗಿ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ
