ಉದಯವಾಹಿನಿ ದೇವದುರ್ಗ:- ಲೋಕ ಕಲ್ಯಾಣಕ್ಕಾಗಿ ಶ್ರೀಕೃಷ್ಣ ಜನಿಸಿದ್ದೂ, ಜಗತ್ತಿಗೆ ಸಾರಿ ಹೋಗಿರುವ ಜೀವನ ಮೌಲ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ನಡೆದರೆ ಜೀವನ ಸುಂದರವಾಗಿರುತದೆ ಎಂದು ಪುರಸಭೆ ಸದಸ್ಯ ನಾಗರಾಜ ನಾಯಕ ಗೂಗಿ ಹೇಳಿದರು.ಅವರು ಪಟ್ಟಣದ ಅಬುಮೋಹಲಾದ ಅಂಗನವಾಡಿ ಕೇಂದ್ರ ೦8 ರಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿಮಾತನಾಡುತ್ತ ಜನನವೇ ಒಂದು ರೋಚಕ , ಲೋಕಕಲ್ಯಾಣ ಮಾಡಿ ಪಾವನವಾಗುತ್ತದೆ. ರಹಸ್ಯವಾಗಿದೆ ಅದನ್ನು ಅರಿಯ ಬೇಕಾಗಿದೆ. ಶ್ರೀಕೃಷ್ಣ ಸರ್ವಸಂಪನ್ನ ಗುಣ, ಮರ್ಯಾದ ಪುರುಷ, ಶ್ರೀಕೃಷ್ಣನ ಗುಣಗಳನ್ನು ಜೀವನದಲ್ಲಿ ಅಳವಡಿ ಸಿಕೊಳಬೇಕು. ಕೃಷ್ಣನ ಆದರ್ಶಗಳನ್ನು ಜೀವನದಲ್ಲಿಅನುಸರಿಸಬೇಕು ಎಂದರು . ನಂತರ ಅಂಗನವಾಡಿ ಕಾರ್ಯಕರ್ತೆ ಸುಜಾತ ನಾಯಕ ಮಾತನಾಡಿ ಶ್ರೀಕೃಷ್ಣನ ಪ್ರತಿಯೊಂದು ಲೀಲೆಗಳನ್ನು ಅರಿತು, ಜೀವನ ನಡೆಸಬೇಕು ಧರ್ಮ ವಿನಾಶದ ಅಂಚಿನಲ್ಲಿದ್ದಾಗ ನಾನು ಜನಿಸುತ್ತೇನೆಂದು ಹೇಳಿದನು ,ದೌಪದಿಯ ವಸ್ತ್ರಾಭರಣದ ಸಂದರ್ಭದಲ್ಲಿ ಸ್ತ್ರೀ ರಕ್ಷಣೆಗಾಗಿ ಬಂದ ಮಹಾನ್ ಪರಮಾತ್ಮ ಶ್ರೀ ಕೃಷ್ಣನಾಗಿದ್ದಾನೆ ಎಂದರು ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಕೌಸರ್ ಬೇಗಂ,ಶಾಂತಮ್ಮ, ಹನುಮಂತಿ,ಭಗಮ್ಮ, ಹನುಮಂತಿ ಸೇರಿದಂತೆ ಮಹಿಳೆಯರು ಮತ್ತು ಮಕ್ಕಳು ಇದ್ದರು. ಚಿಕ್ಕ ಮಕ್ಕಳು ಕೃಷ್ಣ ರಾಧೇಯ ವೇಷಭೂಷಣಗಳನ್ನು ತೊಟ್ಟು ರಂಜಿಸಿದರು.

Leave a Reply

Your email address will not be published. Required fields are marked *

error: Content is protected !!