ಉದಯವಾಹಿನಿ ಸವದತ್ತಿ: ಇಂದು ಮಲ್ಲೂರ ಗ್ರಾಮ ಪಂಚಾಯತ ವ್ಯಾಪ್ತಿ ಯಲ್ಲಿ ಬರುವ ಮಾಟೋಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮದಡಿ ಪೌಷ್ಟಿಕ ಆಹಾರ ಶಿಬಿರ ಮತ್ತು ವಿ ಎಚ್ ಎನ್ ಡಿ ಸಭೆ ಆಯೋಜಿಸಿದ್ದು ಇದರಲ್ಲಿ ಅರೋಗ್ಯ ಇಲಾಖೆಯ ಸಮುದಾಯ ಅರೋಗ್ಯ ಅಧಿಕಾರಿ ಭಾಗ್ಯಶ್ರೀ ಅವರಾದಿ ಮಾತನಾಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ರಕ್ತ ಹೀನತೆ ಮತ್ತು ಅಂಗನವಾಡಿಯಲ್ಲಿ ಬಿಸಿ ಊಟದ ಕುರಿತು ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ಆಶಾ ಮೇಲ್ವಿಚಾರಕರಾದ ಮಂಜುಳಾ ಕಂಬಾರ,ಅಂಗನವಾಡಿ ಕಾರ್ಯಕರ್ತೆಯರಾದ ಶೋಭಾ ಅಂಗಡಿ,ಆಶಾ ಕಾರ್ಯಕರ್ತೆಯರು ಸಮುದಾಯ ಸಂಘಟಕಿ ಶೋಭಾ ತಳವಾರ್ ,ಗರ್ಭಿಣಿಯರು ಬಾಣಂತಿಯರು, ಕಿಶೋರಿಯರು, ಮುದ್ದು ಮಕ್ಕಳು ಹಾಜರಿದ್ದರು .
