
ಉದಯವಾಹಿನಿ, ಮರಿಯಮ್ಮನಹಳ್ಳಿ : ಪಟ್ಟಣದ ಎಸ್ಎಲ್ಎನ್ಎ ಶಿಕ್ಷಣ ಸಂಸ್ಥೆಯ ವಿನಾಯಕ ಆಂಗ್ಲ ಮಾದ್ಯಮ ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾಮಟ್ಟದ ಬಾಲಕ ಹಾಗೂ ಬಾಲಕಿಯರ ಕುಸ್ತಿ ಪಂದ್ಯಾವಳಿಗೆ ಬುಧವಾರ ಜಿಲ್ಲಾ ದೈಹಿಕ ಶಿಕ್ಷಕ ಅಧೀಕ್ಷಕರು ಮಂಜುನಾಥ ಬಿ ಚಾಲನೆ ನೀಡಿದರು.
ಜಿಲ್ಲಾಮಟ್ಟದ 14 ಮತ್ತು 17 ನೇ ವಯಸ್ಸಿನ ಬಾಲಕ ಮತ್ತು ಬಾಲಕಿಯರ ಕುಸ್ತಿ ಪಂದ್ಯಾವಳಿ ಆಯೋಜಕರಾದ ದೈ.ಶಿ.ಶಿ. ಕೆ ಮಂಜುನಾಥ ಪತ್ರಿಕೆಗೆ ಪ್ರತಿಕ್ರಿಯಿಸಿ, ಇಂದು ನಡೆಯುತ್ತಿರುವ ಪಂದ್ಯಾವಳಿಯಲ್ಲಿ ನಮ್ಮ ಜಿಲ್ಲೆಯ ಐದು ತಾಲೂಕುಗಳ ಮಕ್ಕಳು ಭಾಗವಹಿಸುತ್ತಿದ್ದಾರೆ. ಅಲ್ಲದೇ ಸಾಂಪ್ರದಾಯಿಕ ಕ್ರೀಡೆಯಾದ ಕುಸ್ತಿಯನ್ನು ಗ್ರಾಮೀಣ ಮಟ್ಟದಲ್ಲಿ ಆಯೋಜನೆಗೆ ಅವಕಾಶ ಕಲ್ಪಿಸಿದ್ದು ಸಂತಸ ತಂದಿದೆ. ಮುಂದಿನ ದಿನಮಾನದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡುವ ಆಶಯವನ್ನು ಹೊಂದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ತಾ.ದೈ.ಶಿ.ಪ. ಶ್ರೀಕಾಂತ್ ವಾಲ್ಮೀಕಿ, ಹನುಮನಾಯ್ಕ್, ಬೀರಲಿಂಗೇಶ್ವರ, ಕಾಶಪ್ಪ, ಅಶೋಕ, ವಿರುಪಾಕ್ಷಪ್ಪ, ಗೋಣೆಪ್ಪ ಎಲ್, ವೆಂಕಟರಮಣ, ಸಿ.ಉಮಾ, ಸುಶೀಲ, ಹಾಗೂ ಇತರರು ಇದ್ದರು.
