ಉದಯವಾಹಿನಿ ತಾಳಿಕೋಟಿ: ಕೇವಲ ಓದು ಬರಹ ಕಲಿತರೆ ಸಾಲದು ಒಬ್ಬ ಜವಾಬ್ದಾರಿಯುತ ನಾಗರಿಕನಾಗಲು ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳುವುದು ವಿದ್ಯಾರ್ಥಿಗಳಿಗೆ ಅತ್ಯಗತ್ಯವಾಗಿದೆ ಎಂದು ಶಿಕ್ಷಕ ಬಿ. ಆಯ್. ಹಿರೇಹೊಳಿ ಹೇಳಿದರು. ಶಿಕ್ಷಕರ ದಿನಾಚರಣೆ ಅಂಗವಾಗಿ ಎಸ್ ಎಸ್ ವಿದ್ಯಾಸಂಸ್ಥೆಯ ಅಂಗಸಂಸ್ಥೆಯಾದ ಶ್ರೀ ಸಂಗಮೇಶ್ವರ ಪ್ರೌಢಶಾಲೆಯ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನಂತರ ಅವರು ಮಾತನಾಡಿದರು. ಶ್ರೇಷ್ಠ ದಾರ್ಶನಿಕ ಮೌಲ್ಯಾಧಾರಿತ ರಾಜಕಾರಣಿಗಳಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಕೊಡುಗೆ ಶಿಕ್ಷಣ ಕ್ಷೇತ್ರಕ್ಕೆ ಅಪಾರವಾಗಿದೆ ಅವರು ನಮಗೆಲ್ಲರಿಗೂ ಸದಾ ದಾರಿದೀಪವಾಗಿದ್ದಾರೆ ಎಂದವರು ವಿದ್ಯಾರ್ಥಿಗಳು ಶಿಕ್ಷಕರ ಕುರಿತು ಅಪಾರ ಗೌರವ ಭಾವನೆ ಬೆಳೆಸಿಕೊಳ್ಳಬೇಕು ಗುರು ಶಿಷ್ಯರ ಬಾಂಧವ್ಯ ಪವಿತ್ರವಾದದ್ದು ಅದನ್ನು ರಕ್ಷಿಸುವ ಕೆಲಸ ಎರಡು ಕಡೆಯಿಂದಲೂ ಆಗಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಚ್.ಬಿ.ಪಾಟೀಲ.ಎಸ್.ಸಿ.ಗುಡಗುಂಟಿ.
