ಉದಯವಾಹಿನಿ ಬಸವನಬಾಗೇವಾಡಿ: ಅಧುನಿಕತೆಯ ಪ್ರಭಾವದಿಂದ ಜಾನಪದ ಸಂಸ್ಕೃತಿ ಮರೆಯಾಗುತ್ತಿದ್ದು ವಿಷಾದನೀಯ. ಮಾನವನ ಬದುಕಿಗೆ ಜಾನಪದ ಮೌಲ್ಯಾಧಾರಿತವಾಗಿದೆ ಎಂದು ರ‍್ನಾಟಕ ರಾಜ್ಯ ಸಹಕಾರಿ ಮಹಾಮಂಡಳದ ನರ‍್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.
ಶ್ರೀ ನಂದೀಶ್ವರ ರಂಗ ಮಂದಿರದಲ್ಲಿ ಬಸವೇಶ್ವರ ಜಾತ್ರೆಯ ನಿಮಿತ್ಯವಾಗಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಮತ್ತು ತಾಲೂಕು ಘಟಕ ವತಿಯಿಂದ ರ‍್ಪಡಿಸಿದ ” ಬಸವ ಜಾನಪದೋತ್ಸವ” ಉದ್ಘಾಟಿಸಿ ಮಾತನಾಡುತ್ತ , ಜಿಲ್ಲೆಯಲ್ಲಿ ಬಾಳನಗೌಡ ಪಾಟೀಲ ನೇತೃತ್ವದಲ್ಲಿ ಜಾನಪದ ಸಂಸ್ಕೃತಿ ಉಳಿಸುವ ಕರ‍್ಯ ನಡೆದಿದೆ.ಅದಕ್ಕಾಗಿ ಬಾಳನಗೌಡ ಪಾಟೀಲರನ್ನು ಜಾನಪದ ಅಕಾಡೆಮಿ ಸದಸ್ಯರಾಗಿ ನೇಮಕ ಮಾಡಬೇಕೆಂದು ಮಾನ್ಯ ಸಚಿವರಲ್ಲಿ ವಿನಂತಿಸಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಎಸ್ ಪಾಟೀಲ (ಪಡಗಾನೂರ) ಮಾತನಾಡಿ, ಮಾನವನ ಬದುಕು ಜಾನಪದದಿಂದ ಪ್ರಾರಂಭವಾಗಿ ಜಾನಪದದಿಂದ ಕೊನೆಗೊಳ್ಳುತ್ತದೆ.ಆದ್ದರಿಂದ ಜಾನಪದ ಸಂಸ್ಕೃತಿಯು ಸಾಮಾಜಿಕ ಸಂವಿಧಾನವಾಗಿದೆ ಎಂದು ಹೇಳಿದರು.
ತಾಲೂಕು ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಾನಂದ ಮಂಗಾನವರ, ಕನ್ನಡ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ದೇವೇಂದ್ರ ಗೋನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿರಕ್ತ ಮಠದ ಸಿದ್ಧಲಿಂಗ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು. ಜಾತ್ರಾ ಸಮಿತಿ ಅಧ್ಯಕ್ಷ ಎಂ ಜಿ ಆದಿಗೊಂಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಹಿರಿಯ ಕಲಾವಿದ ಬಸಪ್ಪಣ್ಣ ಹಾರಿವಾಳ, ಕಜಾಪ ಮುದ್ದೇಬಿಹಾಳ ತಾಲೂಕಾಧ್ಯಕ್ಷ ಎಂ ಆರ್ ಮುಲ್ಲಾ, ನಿಡಗುಂದಿ ತಾಲೂಕಾಧ್ಯಕ್ಷ ವೈ ಎಸ್ ಗಂಗಶೆಟ್ಟಿ, ಕಜಾಪ ಜಿಲ್ಲಾ ಸದಸ್ಯ ಮೌಲಾಸಾಬ ಜಹಾಗಿರದಾರ,ಜಾತ್ರಾ ಸಮಿತಿ ಸದಸ್ಯರಾದ ಶ್ರೀಧರ್ ಕುಂಬಾರ, ವಿಶ್ವನಾಥ ನಿಡಗುಂದಿ, ನಿಂಗಪ್ಪಣ್ಣ ಕಲ್ಲೂರ ಉಪಸ್ಥಿತರಿದ್ದರು.
ಚುಸಾಪ ಅಧ್ಯಕ್ಷ ಪ್ರಭಾಕರ ಖೇಡದ ಸ್ವಾಗತಿಸಿದರು. ಕೊಟ್ರೇಶ್ ಹೆಗಡ್ಯಾಳ ನಿರೂಪಿಸಿದರು. ಸುಭಾಸ ಹಡಪದ ವಂದಿಸಿದರು.
