ಉದಯವಾಹಿನಿ, ಶಿಡ್ಲಘಟ್ಟ: ವಸುದೈವ ಕುಟುಂಬಮ್ ಈ ವಾಕ್ಯವನ್ನು ಹೇಳಿದ ಶ್ರೀಕೃಷ್ಣ ಪರಮಾತ್ಮನ ಜನ್ಮದಿನವನ್ನು ವಿಶ್ವ ವ್ಯಾಪಿಯಾಗಿ ಆಚರಿಸುತ್ತಿದ್ದಾರೆ ಮಕ್ಕಳಿಗೆ ಸನ್ಮಾರ್ಗದ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ವಿದ್ಯೆಯ ಜೊತೆ ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿ ಮಕ್ಕಳಲ್ಲಿ ಬೆಳೆಸಬೇಕು ಎಂದು ಸಿಟಿಜನ್ ಶಾಲೆಯ ಅಧ್ಯಕ್ಷ ರಾಮಚಂದ್ರರೆಡ್ಡಿ ಹೇಳಿದರು.ನಗರದ ಚಿಂತಾಮಣಿ ರಸ್ತೆಯಲ್ಲಿ ಇರುವ ಸಿಟಿಜನ್ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಜಯಂತಿ ಆಚರಣೆ ಪ್ರಯುಕ್ತ ಮಾತನಾಡಿದ ಇವರು ನಮ್ಮ ಶಾಲೆಯಲ್ಲಿ ಕಳೆದ ವರ್ಷ ಅನಿರೀಕ್ಷಿತವಾಗಿ ಜನ್ಮಾಷ್ಟಮಿ ಪ್ರಾರಂಭ ಮಾಡಿ, ಯಶಸ್ವಿಯಾಯಿತು ಅದನ್ನೇ ಅನುಸರಿಸಿಕೊಂಡು ಎರಡನೇ ವರ್ಷವೂ ಸಹ ಶ್ರೀ ಕೃಷ್ಣ ಜನ್ಮದಿನವನ್ನು ಆಚರಣೆ ಮಾಡಲಾಗುತ್ತಿದೆ. ವಸುದೈವ ಕುಟುಂಬಮ್ ಎಂಬ ಈ ವಾಕ್ಯವನ್ನು ಹೇಳಿದ ಶ್ರೀಕೃಷ್ಣ ಪರಮಾತ್ಮನ ಜನ್ಮದಿನವನ್ನು ಶ್ರದ್ಧಾ ಭಕ್ತಿ ಪೂರ್ವಕವಾಗಿ ಆಚರಿಸುತ್ತಿದ್ದೇವೆ ಇದಕ್ಕೆ ಎಲ್ಲಾ ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳ ಸರಿಯಾದ ಸ್ಪಂದನೆ ನೀಡಿರುವುದಕ್ಕೆ ಯಶಸ್ವಿಯಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಎಲ್.ಕೆ.ಜಿ ಮತ್ತು ಯುಕೆಜಿ ಪುಟ್ಟ ಮಕ್ಕಳು ಶ್ರೀಕೃಷ್ಣ ಮತ್ತು ರುಕ್ಮಿಣಿ ವೇಷಧಾರಿಗಳಾಗಿ ನೃತ್ಯ ಮಾಡುವಾಗ ತಮ್ಮ ಮಕ್ಕಳನ್ನು ಚಪ್ಪಾಳೆಯ ಮೂಲಕ ಉರಿದುಂಬಿಸಿದ ಪೋಷಕರು. ಒಂದನೇ ತರಗತಿ ಮಕ್ಕಳಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಹಾಭಾರತದ ನಾಟಕ ಹಾಗೂ ಸಾಂಸ್ಕೃತಿಕ ನೃತ್ಯ ಪ್ರದರ್ಶನ ಜೊತೆ ಭಗವಾನ್ ಶ್ರೀಕೃಷ್ಣನ ಹಿತ ವಚನಗಳನ್ನು ಹೇಳಿದರು.ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅನಿಲ್ ಶೌರಿ, ಗೌರವಧ್ಯಕ್ಷೆ ಮಂಗಳಮ್ಮ ,ಸದಸ್ಯರಾದ ಅಜಯ್ ಶೇಖರ್ , ಭವ್ಯ , ಶ್ವೇತ , ಲಕ್ಷ್ಮಿ ನವ್ಯ , ವಿವೇಕ್ , ಪ್ರಾಂಶುಪಾಲ ಶಿವಣ್ಣ , ಮುಖ್ಯ ಶಿಕ್ಷಕ ಸತೀಶ್ ಹಾಗೂ ಶಿಕ್ಷಕರು , ಪೋಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!